ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್ಒ) ನಲ್ಲಿ ನಡೆದ ಮಾನಸಿಕ ಲೆಕ್ಕದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತವು ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಇದರಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದ 21 ವರ್ಷದ ನೀಲಕಂಠ ಭಾನು ಪ್ರಕಾಶ್, ಮಾನವ ಕಂಪ್ಯೂಟರ್ ಶಕುಂತಲಾ ದೇವಿಯವರ ದಾಖಲೆಯನ್ನು ಮುರಿದು, ‘ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಹೈದರಾಬಾದ್ ಮೂಲದವರಾಗಿರುವ ನೀಲಕಂಠ, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ನೀಲಕಂಠ ಈಗಾಗಲೇ 4 ವಿಶ್ವ ದಾಖಲೆಗಳನ್ನು ಮತ್ತು 50 ಲಿಮ್ಕಾ ದಾಖಲೆಗಳನ್ನು ಮಾಡಿದ್ದಾರೆ.
ಇದನ್ನೂ ಓದಿ : ಆನ್ಲೈನ್ ಚೆಸ್ ಚಾಂಪಿಯನ್ಶಿಪ್ – ಕ್ವಾರ್ಟರ್ಫೈನಲ್ ತಲುಪಿದ ಭಾರತ
“ನಾನು ವಿಶ್ವದ ಅತಿ ವೇಗದ ಮಾನವ ಕಂಪ್ಯೂಟರ್ ಎಂಬ ಕಾರಣಕ್ಕಾಗಿ 4 ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದೇನೆ. ನನ್ನ ಮೆದುಳು ಕ್ಯಾಲ್ಕುಲೇಟರ್ನ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ಈ ಹಿಂದೆ ಈ ದಾಖಲೆಗಳು ಸ್ಕಾಟ್ ಫ್ಲಾನ್ಸ್ಬರ್ಗ್ ಮತ್ತು ಶಕುಂತಲಾ ದೇವಿಯಂತಹ ಗಣಿತದ ದಂತಕಥೆಗಳ ಹೆಸರಿನಲ್ಲಿ ಇತ್ತು. ಗಣಿತದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಇರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ “ಎಂದು ನೀಲಕಂಠ ಭಾನು ಪ್ರಕಾಶ್ ಎಎನ್ಐಗೆ ತಿಳಿಸಿದರು.
ಇಂಗ್ಲೆಂಡ್, ಜರ್ಮನಿ, ಯುಎಇ, ಫ್ರಾನ್ಸ್, ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ 13 ದೇಶಗಳಿಂದ 57 ವರ್ಷ ವಯಸ್ಸಿನವರೆಗಿನ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನೀಲಕಂಠಗಿಂತ 65 ಅಂಕ ಹಿಂದಿದ್ದ ಲೆಬನಾನಿನ ಪ್ರತಿಸ್ಪರ್ಧಿ ದ್ವಿತೀಯ ಸ್ಥಾನವನ್ನು ಪಡೆದರೆ, ಯುಎಇ ತೃತೀಯ ಸ್ಥಾನ ಪಡೆದಿದೆ.