ಮಾರುಕಟ್ಟೆಗೆ ಲಗ್ಗೆಯಿಟ್ಟ ಮೋದಿ ಮಾಸ್ಕ್..!

0
173
Tap to know MORE!

ಕೊರೊನಾದಿಂದ ರಕ್ಷಣೆ ಪಡೆಯಲು ಬಳಕೆಗೆ ಬಂದ ಮಾಸ್ಕ್ ಹಲವರ ಜೀವನ ನಿರ್ವಹಣೆಗೊಂದು ದಾರಿಯಾಗಿದೆ. ತರಹೇವಾರಿ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತ್ತೀಚೆಗೆ ಕೇರಳದ ಸ್ಟಾರ್ಟ್ ಅಪ್ ಒಂದು ಅವರವರ ಮುಖವನ್ನೇ ಹೋಲುವ ಮಾಸ್ಕ್ ತಯಾರಿಸಿ ಸುದ್ದಿಯಲ್ಲಿತ್ತು. ಇದೀಗ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬಟ್ಟೆ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಮಾಸ್ಕ್ ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಭೋಪಾಲದ ಬಟ್ಟೆ ಅಂಗಡಿಯೊಂದರಲ್ಲಿ ಮೋದಿ ಫೋಟೋ ಪ್ರಿಂಟ್ ಇರುವ ಮಾಸ್ಕ್ ಲಭ್ಯವಿದ್ದು ಅಂಗಡಿಗೆ ತರಿಸಿದ ಕೆಲವೇ ದಿನಗಳಲ್ಲಿ 1000 ಮಾಸ್ಕ್ ಮಾರಟವಾಗಿವೆ. ಪ್ರಧಾನಿ ಮೋದಿ ಜತೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಾಜಿ ಸಿ ಎಂ ಕಮಲ್ ನಾಥ್ ಅವರ ಫೋಟೋ ಪ್ರಿಂಟ್ ಮಾಸ್ಕ್ ಗಳೂ ಲಭ್ಯವಿದೆ. ಆದರೆ ಮೋದಿ ಮಾಸ್ಕ್ ಟ್ರೆಂಡಿಂಗ್ ನಲ್ಲಿದ್ದು ಭಾರಿ ಬೇಡಿಕೆ ಇದೆ ಎಂದು ಅಂಗಡಿ ಮಾಲೀಕರು ಹೇಳುತ್ತಾರೆ.

LEAVE A REPLY

Please enter your comment!
Please enter your name here