ಮಾರ್ನಿಂಗ್ ಕಾಫಿ ಬದಲು ಜೀರ್ಣಾಕಾರಿ ಕಷಾಯ

0
235
Tap to know MORE!

ಬೆಳಿಗ್ಗೆ ಎದ್ದ ಕೂಡಲೇ ಜನಸಾಮಾನ್ಯರ ಮೊದಲ ಕಾರ್ಯಕ್ರಮ ಕಾಫಿ ಟೀ ಕುಡಿಯುವುದು ಆಗಿರುತ್ತದೆ. ಇನ್ನು ಕೆಲವರಿಗೆ ಇದರ ದರ್ಶನವಾಗದೆ ಉದಾಯವಾಗುವುದೇ ಇಲ್ಲ. ಇನ್ನು ದಿನದಲ್ಲಿ ಹಲವು ಬಾರಿ ಮತ್ತೆ ಕಾಫಿ ಟೀ ಯ ಪುನರಾವರ್ತನೆ ಖಂಡಿತ ಇರುತ್ತದೆ. ಕಾಫಿ ಟೀ ಮನಸಿಗೆ ಮುದ ನೀಡಬಹುದು ಹೊರತು ಆರೋಗ್ಯಕ್ಕಲ್ಲ. ಅದರಲ್ಲೂ ಅಧಿಕವಾದ ಕಾಫಿ ಟೀ ಸೇವನೆ ಚಟವಾಗಿ ಬಿಡುತ್ತದೆ. ದೇಹದಲ್ಲಿ ಕೆಫೈನ್ ಅಂಶ ಹೆಚ್ಚಾಗುತ್ತದೆ. ಹೀಗಾಗಿ ದಿನದಲ್ಲಿ ಒಂದೆರಡು ಬಾರಿಯಾದರೂ ಕಾಫಿಯ ಬದಲು ಕಷಾಯದ ಸೇವನೆಯನ್ನು ರೂಢಿಸಿಕೊಳ್ಳುವುದು ಉತ್ತಮ.

ಮನೆಯಲ್ಲೇ ತಯಾರಿಸಬಹುದಾದ ಔಷದಿಯುಕ್ತ ಗಿಡಮೂಲಿಕೆಗಳು, ಧಾನ್ಯಗಳು ಸೇರಿದಂತೆ ಇವುಗಳ ಚೂರ್ಣವನ್ನು ಮಾಡಿ ಹಾಲಿಗೆ ಸೇರಿಸಿ ಕುಡಿಯಬಹುದು. ಕಷಾಯದಲ್ಲಿ ಬಳಸಬಹುದಾದ ವಸ್ತುಗಳು; ಅರಸಿನ, ಅಶ್ವಗಂಧ, ಏಲಕ್ಕಿ, ಒಣಶುಂಠಿ, ಕಟುಕ ರೋಹಿಣಿ, ಕಾಳು ಮೆಣಸು, ಕೊತ್ತಂಬರಿ, ಜಾಯಿಕಾಯಿ, ಜೀರಿಗೆ ಜ್ಯೇಷ್ಠ ಮಧು, ನೆಗ್ಗಿನ ಮುಳ್ಳು, ಬಜೆ, ಭದ್ರಮುಷ್ಠಿ, ಮೆಂತೆ, ಲವಂಗ, ಲಾವಂಚ, ಕಲ್ಲುಸಕ್ಕರೆ, ಶತಾವರಿ, ಹಿಪ್ಪಲಿ, ಇತ್ಯಾದಿ. ಈ ವಸ್ತುಗಳಲ್ಲಿ ಬೇಕಾದನ್ನು ಆರಿಸಿ ಪುಡಿ ಮಾಡಿ ಇಟ್ಟುಕೊಂಡರೆ ಒಂದು ಚಮಚದಷ್ಟು ಹಾಲಿಗೆ ಸೇರಿಸಿ ಕಷಾಯ ತಯಾರಿಸಿ ಕುಡಿಯಬಹುದು. ಈ ವಸ್ತುಗಳ ಔಷಧೀಯ ಗುಣಗಳನ್ನು ಮುಂದಿನ ಬರಹದಲ್ಲಿ ತಿಳಿಸಲಾಗುವುದು

LEAVE A REPLY

Please enter your comment!
Please enter your name here