ಮಾಸ್ಕ್ ಧರಿಸದವರಿಗೆ “ಕೊರೋನಾ” ಕುರಿತು ಪ್ರಬಂಧ ಬರೆಯುವ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್!

0
150
Tap to know MORE!

ಗ್ವಾಲಿಯರ್​: ಮಾಸ್ಕ್ ಧರಿಸದೇ ಉಡಾಫೆಯಿಂದ ಅಡ್ಡಾಡುವವರಿಗೆ ದಂಡ ವಿಧಿಸುವುದು ಒಂದು ರೀತಿಯ ಶಿಕ್ಷೆಯಾದರೆ, ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್ ವಿಧಿಸಿದ ಶಿಕ್ಷೆ ದೇಶದ ಗಮನಸೆಳೆದಿದೆ. ಕೊರೊನಾ ವೈರಸ್ ತಡೆಯುವುದಕ್ಕಾಗಿ ಅಲ್ಲಿನ ಜಿಲ್ಲಾಡಳಿತ ‘ರೊಕೊ ಟೊಕೊ’ ಅಭಿಯಾನ ಶುರುಮಾಡಿದೆ.

ಇದರಂತೆ, ನಿಯಮ ಉಲ್ಲಂಘಕರನ್ನು ಬಯಲು ಬಂಧೀಖಾನೆಯಲ್ಲಿ ಬಿಡಲಾಗುತ್ತದೆ. ಅಲ್ಲಿ ಅವರು ಕರೊನಾ ವೈರಸ್ ಬಗ್ಗೆ ಪ್ರಬಂಧ ಬರೆಯಬೇಕು. ಬರೆದರಷ್ಟೇ ಅವರಿಗೆ ಬಿಡುಗಡೆ. ಹೀಗೊಂದು ದಂಡನೆ ಶನಿವಾರದಿಂದಲೇ ಆರಂಭವಾಗಿದ್ದು, ಶನಿವಾರ ಕನಿಷ್ಠ 20 ನಿಯಮ ಉಲ್ಲಂಘಕರು ಈ ಶಿಕ್ಷೆ ಅನುಭವಿಸಿದ್ದಾರೆ!

ಇದನ್ನೂ ಓದಿ: ಮಂಗಳೂರು: ಲಷ್ಕರ್ ಪರ ಗೋಡೆ ಬರಹ | ಓರ್ವ ಆರೋಪಿ ಬಂಧನ

ಗ್ವಾಲಿಯರ್​ನಲ್ಲಿ ಅನೇಕರು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ. ಬಹುತೇಕರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಅನೇಕರು ಫೇಸ್ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಇನ್ನೂ ಅನೇಕರು ಕತ್ತಿಗೆ ಮಾಸ್ಕ್ ಹಾಕಿಕೊಂಡು ಕಾನೂನು ಪಾಲಕರ ಕಣ್ಣೆದುರು ಮುಖಕ್ಕೇರಿಸಿಕೊಳ್ಳುತ್ತಾರೆ. ಈ ರೀತಿ ನಿಯಮ ಉಲ್ಲಂಘನೆ ತಡೆಯುವುದಕ್ಕೆ ಹೊಸ ದಂಡನೆಯ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here