ಕೋವಿಡ್-19 ನಡುವೆಯೇ ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ,ಮಲೇರಿಯಾ ರೋಗದ ಭೀತಿಯೂ ಎದುರಾಗಿದೆ. ಕಳೆದ ವರ್ಷದ ಡೆಂಗ್ಯೂ ಪ್ರಕರಣಗಳು ನಮ್ಮ ಮುಂದಿದ್ದು, ಈ ವರ್ಷ ಸ್ವಯಂ ಜಾಗೃತಿ ಹೆಚ್ಚು ಅಗತ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಪ್ರ ಸಂಪದ ಪುನರೂರು ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಶ್ ರಾವ್ ಪುನರೂರು ಹೇಳಿದರು.
ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಹಾಗೂ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ಸ್, ಮುಲ್ಕಿ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ ಮತ್ತು ಮಲೇರಿಯ ರೋಗಗಳ ಜಾಗೃತಿ ಕಿರುಚಿತ್ರ ಮತ್ತು ಮಾಹಿತಿ ಕಾರ್ಯಾಗಾರವು ಭಾನುವಾರ ನಡೆಯಿತು.
ಡೆಂಗ್ಯೂ ಮತ್ತು ಮಲೇರಿಯ ರೋಗಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಅತ್ತೂರು, ಕೆಮ್ರಾಲ್ ಇದರ ಮಾರ್ಗರೇಟ್ ಸುದರ್ಶಿನಿ ಅವರು ಡೆಂಗ್ಯೂ,ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ ಮನೆ ಭೇಟಿ,ಜಾಗೃತಿ ಕಾರ್ಯಗಳು ನಡೆಯುತ್ತಿವೆ. ಆದರೆ,ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರ ಹಾಗೂ ಇಂತಹ ಸಂಘ ಸಂಸ್ಥೆಗಳ ಪಾತ್ರ ಇಲ್ಲಿ ಪ್ರಮುಖವಾಗುತ್ತದೆ. ಜನರು ತಮ್ಮ ಮನೆ,ಕಚೇರಿ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ನಿಂತ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗುವುದರಿಂದ ರೋಗಗಳು ಹರಡದಂತೆ ನಾವೆಲ್ಲರೂ ಜಾಗೃತರಾಗ ಬೇಕು ಎಂದು ಹೇಳಿದರು.
ಬಳಿಕ ಆಶಾ ಕಾರ್ಯಕರ್ತೆಯರ ಸಹಕಾರದಲ್ಲಿ ಪ್ರಯಲ್,ತರುಣ್,ಆರಾಧ್ಯ, ಚೈತ್ರ,ಚಿರಾಗ್,ದಿಗಂತ್, ಇವರಿಂದ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಬಗ್ಗೆ 10 ನಿಮಿಷದ ಕಿರು ಪ್ರಹಸನವನ್ನು ಸಾದರಪಡಿಸಿದರು. ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಜಾಗೃತಿ,ಮತ್ತು ತಡೆಗಟ್ಟುವಿಕೆ ಬಗ್ಗೆ 45 ನಿಮಿಷಗಳ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ಸ್,ಮುಲ್ಕಿ ವಲಯದ ಅಧ್ಯಕ್ಷರು ಶ್ರೀ ನವೀನಚಂದ್ರ,ತೋಕೂರು, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು, ಹಳೆಯಂಗಡಿ ಇದರ ಗೌರವ ಅಧ್ಯಕ್ಷರು ಶ್ರೀ ನಾರಾಯಣ. ಜಿ. ಕೆ., ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಲೋಕನಾಥ್ ಭಂಡಾರಿ,ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್, ಶ್ರೀ ದುರ್ಗಾದಾಸ್ ಕುಲಾಲ್, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಯಶೋಧ ದೇವಾಡಿಗ, ಶ್ರೀಮತಿ ಲತಾ ಲೋಕೇಶ್, ಶ್ರೀಮತಿ ಪ್ರಮೀಳಾ,ಶ್ರೀಮತಿ ಪುಷ್ಪ ಸುಕುಮಾರ್,ಶ್ರೀಮತಿ ವನಜ, ಸೌತ್ ಕೆನರಾ ಫೋಟೋ ಗ್ರಾಫರ್ಸ್ ಇದರ ಪದಾಧಿಕಾರಿಗಳು, ಸದಸ್ಯರು, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಇದರ ಪದಾಧಿಕಾರಿಗಳು,ಸದಸ್ಯರು, ಮಹಿಳಾ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು, ಉಪಸ್ಥಿತರಿದ್ದರು.
ಮಹಿಳಾ ಸಮಿತಿಯ ಶ್ರೀಮತಿ ವಾಣಿ ಮಹೇಶ್ ಮತ್ತು ಶ್ರೀಮತಿ ಶೋಭಾ ವರುಣ್ ಅಂಚನ್ ಪ್ರಾರ್ಥನೆ ಹಾಡಿದರು. ಸಂಸ್ಥೆಯ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ ಸ್ವಾಗತಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್, ಅಸೋಸಿಯೇಷನ್ಸ್,ಮುಲ್ಕಿ ವಲಯದ ಕಾರ್ಯದರ್ಶಿ ಶ್ರೀ ಕೆ.ಬಿ ಸುರೇಶ್ ವಂದಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷರು ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರುಪಿಸಿದರು.