MILKHA SINGH| ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ!

0
157
Tap to know MORE!

ಬೆಂಗಳೂರು: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಬರೋಬ್ಬರಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟ ದಿಗ್ಗಜ ಓಟಗಾರ ಮಿಲ್ಖಾ ಸಿಂಗ್‌ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ‘ಫ್ಲೈಯಿಂಗ್‌ ಸಿಖ್’ ಎಂದೇ ಖ್ಯಾತಿ ಪಡೆದಿದ್ದ ಚಾಂಪಿಯನ್‌ ಓಟಗಾರ, ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

1958ರ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಪುರುಷರ 400 ಮೀ. ಓಟದ ಚಾಂಪಿಯನ್‌ ಆಗಿದ್ದ ಮಿಲ್ಖಾ ಸಿಂಗ್‌ ಅವರಿಗೆ 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಕೇವಲ 1/100 ಸೆಕೆಂಡ್‌ಗಳ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿಹೋಗಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೆಲ ದಿನಗಳ ಹಿಂದಷ್ಟೇ ಕೋವಿಡ್‌-19 ಮಹಾಮಾರಿ ಸೋಂಕಿನ ಕಾರಣ ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲ್‌ ಕೌರ್‌ ಕೂಡ ಅಸುನೀಗಿದ್ದರು. ಇದೀಗ ಅವರ ಮಾರ್ಗದಲ್ಲೇ ಫ್ಲೈಯಿಂಗ್ ಸಿಂಖ್ ಕೂಡ ಇಹಲೋಹ ತ್ಯಜಿಸಿ ಹೋಗಿದ್ದಾರೆ. ಅಗಲಿದ ದಿಗ್ಗಜನಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here