ಮಿಸ್ ಯೂ…!

0
191
Tap to know MORE!

ನನ್ನ ಜೀವನದಲ್ಲಿ ಆ ವ್ಯಕ್ತಿಯ ಪರಿಚಯ ಆಕಸ್ಮಿಕ.ಆದರೆ ಆ ವ್ಯಕ್ತಿಯು ನನ್ನ ಜೀವನದಲ್ಲಿ ತುಂಬಾ ವಿಶೇಷವಾದವರು. ಅವರನ್ನು ಒಂದು ರೀತಿಯಲ್ಲಿ ಗೆಳೆಯ ಎಂದೇ ಕರೆಯಬಹುದು.ಆ ಗೆಳೆಯನ ಪರಿಚಯವಾಗಿ ನಾಲ್ಕು ವರುಷಗಳಾದರು ಅವನು ನನ್ನ ಕುಟುಂಬದ ಒಂದು ಸದಸ್ಯನ ಹಾಗೆ ಕಾಣುತ್ತಾನೆ. ಈ ಗೆಳೆಯನ ಬಗ್ಗೆ ಹೇಳಹೊರಟರೆ ಅದು ಒಂದೆರಡು ವಾಕ್ಯಗಳಲ್ಲಿ ಮುಗಿಯುವುದಿಲ್ಲ.ಅವನಲ್ಲಿ ನನ್ನ ತಂದೆಯ ಕೆಲವು ಗುಣಗಳು ಮತ್ತು ಕಾಳಜಿಯನ್ನು ಕಂಡಿದ್ದೇನೆ. ಮುಗ್ದ ಮನಸು ಮತ್ತು ಮೂಗಿನ ತುದಿಯ ತನಕದ ಕೋಪ.ಆ ಕೋಪವನ್ನು ನೋಡಲು ಒಂದು ತರಹದ ಖುಷಿ.ಪ್ರತಿ ವಿಷಯದಲ್ಲಿಯೂ ಯಾಕೆ ಏನು ,ಎಂಥ ಹೇಳಿ ಕೇಳದೆ ಎಲ್ಲಾ ಚಟುವಟಿಕೆಯಲ್ಲಿಯೂ ಭಾಗವಹಿಸು ಎಂದೂ ಪ್ರೇರೇಪಿಸುತ್ತಾನೆ. ಎಲ್ಲಾ ಕಷ್ಟ ಸುಖಗಳಲ್ಲಿಯೂ ಜೊತೆಯಾಗಿ ಅವರಿಗೆ ಆ ಕಷ್ಟ ಎದುರಾಗಿದೆ ಎನ್ನುವ ರೀತಿಯಲ್ಲಿ ಆ ಕಷ್ಟಗಳನ್ನು ಪರಿಹರಿಸುತ್ತಾನೆ. ಆದರೆ ಅವನು ಮಾಡುವ ಜಗಳವು ನನಗೆ ಬೇಜಾರು ಉಂಟು ಮಾಡಿದರೂ ಆ ಜಗಳ ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ದಿನದ 24 ಗಂಟೆ ತಮಾಷೆಯನ್ನು ಮಾಡುತ್ತಾ ಮನೆಯ ಎಲ್ಲಾ ಸದಸ್ಯರನ್ನು ಸಂತೋಷದಲ್ಲಿ ಇರಿಸುವನು.ನನ್ನ ಹಾಗೆ ಅವರಿಗೂ ಗೆಳೆಯ ಗೆಳತಿಯರು ಎಂದರೆ ತುಂಬಾ ಇಷ್ಟ.ಜೀವನದಲ್ಲಿ ಏನೇ ಕಷ್ಟ ಬಂದರೂ ಅಗತ್ಯಕ್ಕೆ ಸಹಾಯ ಮಾಡುವ ಗೆಳೆಯ ಇದ್ದಾನೆ ಎಂದು ಹೇಳಲು ಒಂದು ಹೆಮ್ಮೆಯ ವಿಚಾರ. ಒಂದು ಮಾತು ಮಾತ್ರ ಸತ್ಯ.ಈ ವ್ಯಕ್ತಿಯಿಂದ ನಾನು ತುಂಬಾ ವಿಷಯವನ್ನು ಅರ್ಥ ಮಾಡಿಕೊಂಡಿದ್ದೇನೆ .ಜಾತಿ ಎಂಬುದನ್ನು ನೋಡಬಾರದು. ಜೀವನದಲ್ಲಿ ಸಂಬಂಧ ಅನ್ನೋದು ಯಾವತ್ತು ವ್ಯವಹಾರ ವಾಗಿರಬಾರದು ಯಾವುದೇ ವಿಷಯದಲ್ಲಿ ಸಂಶಯ ಪಡಬಾರದು ಎಂದು ಜೀವನ ಪಾಠವನ್ನು ಕಳಿಸಿದ್ದಾರೆ. ಗೆಳೆಯ ಮತ್ತು ಗೆಳತಿ ಮುಖ್ಯ ಅದರಲ್ಲಿ ಬೆಸ್ಟ್ ಗೆಳೆಯನ ಪ್ರೀತಿ ತುಂಬಾ ಮುಖ್ಯ.ಈ ಗೆಳೆಯ ನನ್ನ ಜೀವನದಲ್ಲಿ ಒಂದು ಕಾವಲುಗಾರ ಅಂತಾನೇ ಹೇಳಬಹುದು. ಮಿಸ್ …..ಯು

– ಸ್ಪೂರ್ತಿ ಕಮಲ್ ಪಿ. ಎಸ್

ಪತ್ರಿಕೋದ್ಯಮ ವಿಭಾಗ ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here