ಮುಂಗಾರು ಅಧಿವೇಶನಕ್ಕೂ ಮುನ್ನ ಕೋವಿಡ್ ಟೆಸ್ಟ್ – ಅನಂತ್ ಕುಮಾರ್ ಹೆಗಡೆ ಸೇರಿದಂತೆ 17 ಸಂಸದರಲ್ಲಿ ಸೋಂಕು ಪತ್ತೆ!

0
217
Tap to know MORE!

ಹೊಸದಿಲ್ಲಿ: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ದೇಶದ ಒಟ್ಟು 17 ಮಂದಿ ಸಂಸದರಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢವಾಗಿದೆ ಎಂದು ವರದಿಯಾಗಿದೆ.

ಸುದ್ದಿ ಸಂಸ್ಥೆ ಎಎನ್ ಐ ಈ ಬಗ್ಗೆ ವರದಿ ಮಾಡಿದ್ದು, ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗಡೆ, ಪ್ರವೇಶ್ ಸಾಹೇಬ್ ಸಿಂಗ್ ಸೇರಿದಂತೆ 17 ಮಂದಿ ಸಂಸದರಿಗೆ ಕೋವಿಡ್ ಸೋಂಕು ದೃಢವಾಗಿದೆ ಎಂದಿದೆ.

ಇಂದಿನಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಿದೆ. ಸಂಸದರು ಈಗಾಗಲೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ರವಿವಾರ ಐವರು ಸಂಸದರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು.

ಸಾಮಾಜಿಕ ಅಂತರ ಕಲ್ಪಿಸುವ ಉದ್ದೇಶದಿಂದ ಸದನದಲ್ಲಿ ಆಸನ ವ್ಯವಸ್ಥೆಯನ್ನು ಅದಲು ಬದಲು ಮಾಡಲಾಗಿದೆ. ಕೆಲವರಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ಮತ್ತು ಮೊಗಸಾಲೆಗಳಲ್ಲಿ ಕುಳಿತು ಸದನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here