ಮುಂದಿನ ವಾರದಿಂದ ಕೋವಿಡ್ ಲಸಿಕೆ ಸ್ಪುಟ್ನಿಕ್ V ಮಾರುಕಟ್ಟೆಯಲ್ಲಿ ಲಭ್ಯ

0
129
Tap to know MORE!

ನವದೆಹಲಿ, ಮೇ 13: ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನಂತರ ಭಾರತದಲ್ಲಿ ಅನುಮೋದನೆ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ಹೇಳಿದ್ದಾರೆ.

ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ದೇಶಿ ಔಷಧ ತಯಾರಿಕಾ ಕಂಪನಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಜುಲೈ ತಿಂಗಳಿನಿಂದ ಉತ್ಪಾದಿಸಲಿದೆ. ಸದ್ಯಕ್ಕೆ ರಷ್ಯಾದಿಂದ ಹಂತ ಹಂತವಾಗಿ ಲಸಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ 15.6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಗುರಿ ಹೊಂದಲಾಗಿದೆ. ಮುಂದಿನ ಐದು ತಿಂಗಳಲ್ಲಿ 2 ಬಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಭ್ಯವಾಗಲಿದೆ ಎಂದು ವಿಕೆ ಪಾಲ್ ಹೇಳಿದರು.

ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ವಿಸ್ತರಣೆಗೆ ಕೇಂದ್ರ ಅನುಮೋದನೆ

ಸರಿ ಸುಮಾರು ಶೇ 91.6ರಷ್ಟು ಪರಿಣಾಮಕಾರಿ ಎನಿಸಿಕೊಂಡಿರುವ ಸ್ಪುಟ್ನಿಕ್ ಅತ್ಯಂತ ಸುರಕ್ಷಿತ ಹಾಗೂ ಯುಕೆ ರೂಪಾಂತರಿ ವೈರಸ್ ಮೇಲೂ ಪ್ರಭಾವ ಬೀರಬಲ್ಲದು ಎಂದು ವರದಿಗಳು ಬಂದಿವೆ. ಸುಮಾರು 60ಕ್ಕೂ ಅಧಿಕ ದೇಶಗಳಲ್ಲಿ ತುರ್ತು ಬಳಕೆಗೆ ಸ್ಪುಟ್ನಿಕ್ ಲಸಿಕೆ ನೀಡಲು ಅನುಮೋದನೆ ಸಿಕ್ಕಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here