ಮುಂದಿನ ಶೈಕ್ಷಣಿಕ ವರ್ಷದಿಂದ ‘ಬೆಂಗಳೂರು ಸೆಂಟ್ರಲ್ ಯುನಿವರ್ಸಿಟಿ’ ಯು ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ

0
187
Tap to know MORE!

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದಿಂದ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ‘ಬೆಂಗಳೂರು ನಗರ ವಿಶ್ವವಿದ್ಯಾಲಯ’ ಎಂಬ ಹೊಸ ಹೆಸರು ನಾಮಕರಣವಾಗಲಿದೆ. ವಿಶ್ವವಿದ್ಯಾಲಯವು ಒಂದು ರಾಜ್ಯ ಸಂಸ್ಥೆಯಾಗಿರುವುದರಿಂದ ಹೆಸರಿನಲ್ಲಿ ‘ಸೆಂಟ್ರಲ್’ ಪದ ಬಳಕೆ ತಪ್ಪು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆಯ ಮರುನಾಮಕರಣದ ಬಗ್ಗೆ ಹಲವು ಬಾರಿ ಮಾತುಕತೆ ನಡೆದಿದ್ದು, ಇದರ ಅಂತಿಮ ನಿರ್ಧಾರವನ್ನು ಇತ್ತೀಚೆಗೆ ಕ್ಯಾಬಿನೆಟ್ ದೃಢಪಡಿಸಿತು.

ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಬೆಂಗಳೂರು, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರಕ್ಕೆ ವಿಂಗಡಿಸಲಾಗಿತ್ತು‌. ಆದರೆ ನಗರದಲ್ಲಿ ಕ್ಯಾಂಪಸ್ ಇರುವುದರಿಂದ ಈ ಸಂಸ್ಥೆಯನ್ನು ನಗರ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ ಎಂದು ಉನ್ನತ ಶಿಕ್ಷಣ ಆಯುಕ್ತ ಪ್ರದೀಪ್ ಪಿ ತಿಳಿಸಿದರು. ಅದಕ್ಕೆ ಸಂಬಂಧಿಸಿದ ಹೆಚ್ಚಿನ ಕಾಲೇಜುಗಳು ನಗರದ ಗಡಿಯೊಳಗೆ ಇವೆ. ನಗರದೊಳಗೆಯೇ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಇತರ ನಗರಗಳಂತೆಯೇ, ಈ ಸಂಸ್ಥೆಯನ್ನು ತನ್ನದೇ ಆದ ಗುರುತನ್ನು ಹೊಂದಲು ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ.

ಕ್ಯಾಬಿನೆಟ್ ಅನುಮೋದನೆಯ ನಂತರ, ಈ ಸುಗ್ರೀವಾಜ್ಞೆಯು ರಾಜ್ಯಪಾಲರ ಬಳಿಗೆ ಹೋಗುತ್ತದೆ. ನಂತರ ಅದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು, ಇದು ಈಗ ಸುಗ್ರೀವಾಜ್ಞೆಗೆ ಹೋಗುತ್ತಿರುವುದರಿಂದ, ಮುಂಬರುವ ಶೈಕ್ಷಣಿಕ ವರ್ಷದಿಂದ ಬದಲಾದ ಹೆಸರು ಜಾರಿಯಲ್ಲಿರುತ್ತದೆ .

ಈ ಮಧ್ಯೆ, ವಿಶ್ವವಿದ್ಯಾಲಯವು, 150 ಕೋಟಿ ರೂ.ಗಳ ಮೌಲ್ಯದ ಫೇಸ್‌ಲಿಫ್ಟ್ ಮತ್ತು ಸಂಸ್ಥೆಯ ಪುನರುಜ್ಜೀವನಗೊಳಿಸುವ ಯೋಜನೆಗಳನ್ನು ಅನುಮೋದಿಸುವ ಪ್ರಕ್ರಿಯೆಯಲ್ಲಿದೆ.

150 ಕೋಟಿ ರೂ.ಗಳ ಯೋಜನೆಯನ್ನು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಅಶ್ವತ್ ನಾರಾಯಣ್ ಅವರು ಪರಿಶೀಲಿಸಲಿದ್ದಾರೆ. ಪಾರಂಪರಿಕ ಕಟ್ಟಡಗಳನ್ನು ನವೀಕರಿಸುವುದು, ಹೊಸ ಶೈಕ್ಷಣಿಕ ವಿಭಾಗದ ರಚನೆ, ಹೊಸ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯವನ್ನೂ ನಿರ್ಮಿಸಲಾಗುವುದು.

LEAVE A REPLY

Please enter your comment!
Please enter your name here