ಮುಂದೂಡಲಾಗಿದ್ದ ಜೆಇಇ, ನೀಟ್ ಪರೀಕ್ಷಾ ದಿನಾಂಕಗಳು ಪ್ರಕಟ

0
205
Tap to know MORE!

ಜೆಇಇ ಮೇಯ್ನ್ಸ ಪರೀಕ್ಷೆಯನ್ನು ಸೆಪ್ಟೆಂಬರ್ 1-6ರ ನಡುವೆ, ಸೆಪ್ಟೆಂಬರ್ 27 ರಂದು ಜೆಇಇ ಎಡ್ವಾನ್ಸ್ಡ್ ಮತ್ತು ಸೆಪ್ಟೆಂಬರ್ 13 ರಂದು ನೀಟ್ (ಯುಜಿ) 2020 ಪರೀಕ್ಷೆ ನಡೆಯಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಅವರು ಹೇಳಿದರು.ಜೆಇಇ ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ 1 ರಿಂದ 6 ರವರೆಗೆ, ಎರಡು ಪಾಳಿಯಲ್ಲಿ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಹಾಗೆಯೇ, ನೀಟ್ (ಯುಜಿ) ಪರೀಕ್ಷೆಯು ಸೆಪ್ಟೆಂಬರ್ 13 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ.ಜೆಇಇ ಮತ್ತು ನೀಟ್ ಎರಡಕ್ಕೂ ಕ್ರಮ ಸಂಖ್ಯೆ ಮತ್ತು ಪರೀಕ್ಷಾ ಕೇಂದ್ರವನ್ನು ಹೊಂದಿರುವ ಪ್ರವೇಶ ಪತ್ರಗಳನ್ನು ನೀಡುವ ದಿನಾಂಕಗಳನ್ನು, ಪರೀಕ್ಷೆಯ 15 ದಿನಗಳ ಮೊದಲು ಪ್ರಕಟಿಸಲಾಗುತ್ತದೆ ಎಂದರು.

ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here