ಮುಂಬೈನಲ್ಲಿ ಯಶಸ್ವಿಯಾದ ‘ಚೇಸ್ ದಿ ವೈರಸ್’ ಉಪಕ್ರಮ

0
145
Tap to know MORE!

ಕಳೆದ ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ, ಕೊರೋನಾ ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ನಗರವಾದ ಮುಂಬೈನಲ್ಲಿ “ಚೇಸ್ ದಿ ವೈರಸ್” ಉಪಕ್ರಮವು ಉತ್ತಮ ಫಲಿತಾಂಶಗಳನ್ನು ಪಡೆದುಕೊಂಡಿದೆ. ಆದ್ದರಿಂದ, ಈಗ ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು, ರಾಜ್ಯದ ಇತರ ಭಾಗಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ವಿಶ್ವದಲ್ಲಿ 10 ದಶಲಕ್ಷಕ್ಕೂ ಹೆಚ್ಚಿನ ಕೊರೋನಾ ಪ್ರಕರಣಗಳನ್ನು ವರದಿಯಾಗಿದೆ ಮತ್ತು ಅವುಗಳಲ್ಲಿ ಅರ್ಧದಷ್ಟು ಸೋಂಕಿತರು ಯುರೋಪ್ ಮತ್ತು ಅಮೇರಿಕಾದಲ್ಲಿದ್ದಾರೆ. ಭಾರತದಲ್ಲಿ, ಒಟ್ಟು ಪ್ರಕರಣಗಳ ಸಂಖ್ಯೆ 6.9 ಲಕ್ಷ ದಾಟಿದೆ ಮತ್ತು ಸುಮಾರು 18,000 ಸೋಂಕಿತರು ಸಾವನ್ನಪ್ಪಿದ್ದಾರೆ.

‘ಚೇಸ್ ದಿ ವೈರಸ್’ ಅಭಿಯಾನದ ಬಗ್ಗೆ :

ಕೊರೋನಾ ಸಾಂಕ್ರಾಮಿಕದ ಅತ್ಯಂತ ಭೀಕರ ಪರಿಸ್ಥಿತಿಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರವು 2020 ರ ಮೇ 27 ರಂದು ಮುಂಬೈನಲ್ಲಿ ‘ಚೇಸ್ ದಿ ವೈರಸ್’ ಅಭಿಯಾನವನ್ನು ಪ್ರಾರಂಭಿಸಿತು. ಅಭಿಯಾನದ ಅಡಿಯಲ್ಲಿ, ಕೋವಿಡ್-19 ರೋಗಿಯ 15 ನಿಕಟ ಸಂಪರ್ಕಿತರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. ಅಲ್ಲಿನ ಸೌಲಭ್ಯಗಳು, ಕ್ಲಿನಿಕ್ ಸಮಯ, ಇತರ ರೋಗ ಲಕ್ಷಣಗಳು, ಊಟೋಪಚಾರ ಮತ್ತು ಇತರ ಸೌಲಭ್ಯಗಳ ಬಗ್ಗೆ ಸಮುದಾಯದ ಮುಖಂಡರು ಜನರಿಗೆ ತಿಳಿಸುತ್ತಾರೆ.

ಕೋವಿಡ್-19 ಸೋಂಕಿತರೊಂದಿಗೆ ನಿಕಟ ಸಂಪರ್ಕಕ್ಕೆ ಬರುವ 15 ಆಪ್ತರನ್ನು, ಕಟ್ಟುನಿಟ್ಟಾಗಿ ಸಾಂಸ್ಥಿಕ ಸಂಪರ್ಕತಡೆಗೆ ಒಳಪಡಿಸಲಾಗುತ್ತದೆ.

ಇತರ ರೋಗ ಲಕ್ಷಣಗಳು ಇರುವ ರೋಗಿಗಳ ಬಗ್ಗೆ, ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಲಭ್ಯವಿರುವ ಊಟ, ಶೌಚಾಲಯಗಳ ಸ್ವಚ್ಛತೆಯ ಬಗ್ಗೆ ಮತ್ತು ಖಾಸಗಿ ಚಿಕಿತ್ಸಾಲಯಗಳ ಬಗ್ಗೆ ಮಾಹಿತಿ ನೀಡಲು ಸಮುದಾಯದ ಮುಖಂಡರನ್ನು ನೇಮಿಸಲಾಗಿದೆ.

“ಕೋವಿಡ್-19 ಸಂಪರ್ಕದ ಜಾಡಿನ ಸರಪಳಿಯನ್ನು ಮುರಿಯುವ ಉದ್ದೇಶದಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಅಲ್ಲಿ ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಪ್ರತ್ಯೇಕತೆಗೆ ಗಮನ ನೀಡಲಾಗುತ್ತಿದೆ” ಎಂದು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜೋಯ್ ಮೆಹ್ತಾ ಅವರ ಹೇಳಿದರು.

ಕೋವಿಡ್-19 ಪ್ರಸರಣದ ಸರಪಳಿಯನ್ನು ಮುರಿಯಲು ಸಂಪರ್ಕ ಪತ್ತೆಹಚ್ಚುವಿಕೆಯ ಕುರಿತು ನಿರಂತರ ಸಮೀಕ್ಷೆಯ ಮೂಲಕ ಯಶಸ್ಸನ್ನು ಸಾಧಿಸಲಾಗಿದೆ. ಅಲ್ಲದೆ, ಚಿಕಿತ್ಸೆಯ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಲು ಸುಮಾರು 11 ತಜ್ಞ ವೈದ್ಯರ ತಂಡವನ್ನು ಸರ್ಕಾರ ರಚಿಸಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೂ ಕಳುಹಿಸಲಾಗಿದೆ. 24 ಗಂಟೆಗಳ ಕಾಲವೂ ವೈದ್ಯರು ಲಭ್ಯವಿರುತ್ತಾರೆ ಮತ್ತು ಚಿಕಿತ್ಸೆ ಅಥವಾ ತುರ್ತು ಅಗತ್ಯವಿರುವ ಯಾವುದೇ ಜಿಲ್ಲೆಯವರೂ ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here