ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಮುಖಗವಚ(ಮಾಸ್ಕ್) ಧರಿಸುವ ಮಹತ್ವವನ್ನು ತಿಳಿ ಹೇಳುವ ಉದ್ದೇಶದಿಂದ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಂತ್ರಿಗಳು, ಸೆಲೆಬ್ರಿಟಿಗಳು ಮತ್ತು ಹಲವಾರು ಅಧಿಕಾರಿಗಳು ಗುರುವಾರ ಇಲ್ಲಿ ‘ಮಾಸ್ಕ್ ಡೇ’ ಆಚರಿಸಿದರು.
“ಕೋವಿಡ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮುಖಗವಚಗಳ ಪಾತ್ರವು ನಿರ್ಣಾಯಕವಾಗಿದೆ. ಮುಖಗವಚವನ್ನು ಧರಿಸಿ ಕೊರೋನಾದಿಂದ ರಕ್ಷಿಸೋಣ” ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ, ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು ಹಲವಾರು ಇತರ ಪ್ರಖ್ಯಾತ ವ್ಯಕ್ತಿಗಳೊಂದಿಗೆ, ವಿಧಾನಸೌಧದ ಹೊರಗೆ ರ್ಯಾಲಿಯನ್ನು ಕೈಗೊಂಡರು. ಕೊರೋನವೈರಸ್ ಹರಡುವುದನ್ನು ತಡೆಗಟ್ಟಲು ಮುಖಗವಚ ಧರಿಸುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.
ರ್ಯಾಲಿಯಲ್ಲಿ ಭಾಗವಹಿಸಿದವರು, ಹಲವು ಸಂದೇಶಭರಿತ ಫಲಕಗಳನ್ನು ಹಿಡಿದುಕೊಂಡಿರುವುದು ಗಮನ ಸೆಳೆಯಿತು. ‘ಮಾಸ್ಕ್ ಅಪ್ ಹ್ಯುಮಾನಿಟಿ’, ‘ದಯೆ, ಮುಖವಾಡ ಮತ್ತು ಬಂಧಿಸು’ ಮತ್ತು ‘ಹೀರೋ + ಮಾಸ್ಕ್ ಸೂಪರ್ ಹೀರೋ, ‘ಹೀರೋ – (ಮೈನಸ್) ಮಾಸ್ಕ್ ಝೀರೋ’ – ಫಲಕಗಳಲ್ಲಿ ಕಂಡು ಬಂದ ಕೆಲವು ಸಂದೇಶಗಳು.