ಮುಖೇಶ್ ಅಂಬಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ

1
180
Tap to know MORE!

ಫೋರ್ಬ್ಸ್‌ನ ಇತ್ತೀಚಿನ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಶತಕೋಟ್ಯಾಧಿಪತಿ ಮುಖೇಶ್ ಅಂಬಾನಿಯವರು, ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದ್ದಾರೆ. ತೈಲ ಸಂಸ್ಥೆಯಿಂದ ಟೆಲಿಕಾಂ ಸಂಘಟನೆಯಾದ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷರಾಗಿರುವ ಅಂಬಾನಿ, ಏಸ್ ಅಮೆರಿಕನ್ ಹೂಡಿಕೆದಾರ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ ಫೋರ್ಬ್ಸ್‌ನ ರಿಯಲ್ ಟೈಮ್ ಶ್ರೇಯಾಂಕದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.

ಅಂಬಾನಿಯ ಸಂಪತ್ತು $75 ಬಿಲಿಯನ್ ಎಂದು ಫೋರ್ಬ್ಸ್ ಅಂದಾಜಿಸಿದೆ (ಭಾರತೀಯ ಮೌಲ್ಯದಲ್ಲಿ 5.61 ಲಕ್ಷ ಕೋಟಿ ರೂ.) . ಸದ್ಯ, ಅಂಬಾನಿಯು ಫೇಸ್‌ಬುಕ್ ಸಹ-ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಹಿಂದಿದ್ದಾರೆ. ಅವರ ಸಂಪತ್ತು $89 ಬಿಲಿಯನ್ ಆಗಿದೆ.

ವಿಶ್ವದ ಟಾಪ್ 5 ಶ್ರೀಮಂತರ ಪಟ್ಟಿ ಈ ಕೆಳಗಿನಂತಿದೆ :

  1. ಜೆಫ್ ಬೆಜೋಸ್ – ಅಮೆಜಾನ್ ಸಂಸ್ಥಾಪಕ – $185.8 ಬಿಲಿಯನ್
  2. ಬಿಲ್ ಗೇಟ್ಸ್ – ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ – $113.1 ಬಿಲಿಯನ್
  3. ಬರ್ನಾರ್ಡ್ ಅರ್ನಾಲ್ಟ್ – LVMH ನ ಮುಖ್ಯಸ್ಥ – $112 ಬಿಲಿಯನ್
  4. ಮಾರ್ಕ್ ಜುಕರ್ ಬರ್ಗ್ – ಫೇಸ್ಬುಕ್ ಸಹ ಸಂಸ್ಥಾಪಕ – $89 ಬಿಲಿಯನ್
  5. ಮುಖೇಶ್ ಅಂಬಾನಿ – ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ – $75 ಬಿಲಿಯನ್

1 COMMENT

LEAVE A REPLY

Please enter your comment!
Please enter your name here