ಸಿಎಂ ಬದಲಾವಣೆ ಬಹುತೇಕ ಫಿಕ್ಸ್! ಜೂನ್ ತಿಂಗಳಿನಿಂದ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ?

0
312
Tap to know MORE!

ಬೆಂಗಳೂರು, ಮೇ. 26: ವಯೋ ಸಹಜ ಕಾರಣದಿಂದ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಪಟ್ಟದಿಂದ ಕೆಳಗೆ ಇಳಿಯಲಿದ್ದಾರೆ. ಅಂದುಕೊಂಡಂತೆ ಆದಲ್ಲಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ‘ಯಂಗ್ ಸಿಎಂ’ ಹೆಸರನ್ನು ಪ್ರಧಾನಿ ಮೋದಿ ಅವರೇ ಘೊಷಣೆ ಮಾಡಲಿದ್ದಾರೆ. ಆ ಅಚ್ಚರಿಯ ಹೊಸ ಸಿಎಂ ಯಾರು ಅಂತ ಈವರೆಗೂ ಯಾರಿಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ!

ಗುಂಪುಗೂಡಿ ಕ್ರಿಕೆಟ್ ಆಡುವವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ!

ಬಿಜೆಪಿ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿರುವ ವಿಚಾರವಿದು. ಬಿಜೆಪಿ ಪಕ್ಷದ ನೀತಿ ಸಂಹಿತೆ ಪ್ರಕಾರ 75 ವರ್ಷ ಮೇಲ್ಪಟ್ಟವರು ಸಿಎಂ ಆಗುವಂತಿಲ್ಲ. ಯಡಿಯೂರಪ್ಪ ಮಾತ್ರ ಆ ವಿಚಾರದಲ್ಲಿ ಅದೃಷ್ಟವಂತರು. ಅವರು ಬಿಜೆಪಿ ಪಕ್ಷ ಕಟ್ಟಲು ಮಾಡಿದ್ದ ತ್ಯಾಗ ತೆಗೆದುಕೊಂಡ ಪರಿಶ್ರಮ ಲೆಕ್ಕ ಹಾಕಲು ಸಾಧ್ಯವಿಲ್ಲ. ಸದ್ಯ 79 ವರ್ಷ ಗಟಿ ದಾಟುತ್ತಿರುವ ಯಡಿಯೂರಪ್ಪ ನಂಥ ನಾಯಕ ಬಿಜೆಪಿಯಲ್ಲಿ ಹುಡುಕಿದರೂ ಸಿಗಲ್ಲ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅವರಲ್ಲಿ ಈ ಮೊದಲು ಇದ್ದ ಜನಪರ ಕಾಳಜಿ ಸಮಾಜವಾದದ ತತ್ವ, ರೈತ ಪರ ಕಾಳಜಿ, ಪಕ್ಷ ಕಟ್ಟಲು ಅವರು ಹಾಕಿದ ಪರಿಶ್ರಮಕ್ಕೆ ಪಕ್ಷವೂ ಅಷ್ಟೇ ನಿಷ್ಠಾವಂತಿಕೆ ತೋರಿದೆ. ಹೀಗಾಗಿಯೇ ಯಡಿಯೂರಪ್ಪ ಪಕ್ಷದ ವಯೋ ನೀತಿ ಮಿರಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ಕಲ್ಪಿಸಿದೆ.

ಲಾಕ್ಡೌನ್ ಉಲ್ಲಂಘಿಸಿದ ವಾಹನ ಚಾಲಕರಿಗೆ ಕಸ ಎತ್ತುವ ಶಿಕ್ಷೆ..!

ಮುಂದಿನ ಚುನಾವಣೆಯ ಮೇಲೆ ಗುರಿಯಿಟ್ಟು ಆಯ್ಕೆ ಸಾಧ್ಯತೆ!

ಮುಂದಿನ ಚುನಾವಣೆಯನ್ನು ಮನಸಲ್ಲಿ ಇಟ್ಟುಕೊಂಡು ಕೇಂದ್ರ ವರಿಷ್ಠರು ಸಿಎಂ ಆಯ್ಕೆಗೆ ಹೊರಟಿದ್ದಾರೆ. ಅದರಲ್ಲಿ ಇರುವ ನಾಯಕರ ಪೈಕಿ ಸಂಸದ ಪ್ರಹ್ಲಾದ ಜೋಶಿ ಹೆಸರು ಮೊದಲಿನಿಂದಲೂ ಕೇಳಿ ಬಂದಿತ್ತು ಸಿಎಂ ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ, ಸಮಾಧಾನಕರ ಮನಸ್ಥಿತಿ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಲ್ಲ ನಾಯಕ ಎಂದೇ ಬಿಂಬಿತವಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ನಿಜವಾದ ನಾಯಕನ ಬದಲಿಗೆ ರಾಜ್ಯದ ಪ್ರಭಾವಿ ಜಾತಿ ಆಧಾರಿತ ನಾಯಕನ ಅನಿವಾರ್ಯತೆಗೆ ಬಿಜೆಪಿ ನಾಯಕರು ಬಿದ್ದಂತೆ ಕಾಣುತ್ತಿದ್ದಾರೆ. ಹೀಗಾಗಿ ಪ್ರಹ್ಲಾದ ಜೋಶಿ ಸಿಎಂ ಆಗುತ್ತಾರೆ ಎಂಬ ಮಾತುಗಳು ತೆರೆ ಮರೆಗೆ ಸರಿದಿವೆ. ಆ ಸ್ಥಾನದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ, ಸಿ.ಟಿ. ರವಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಮುರುಗೇಶ ನಿರಾಣಿ ಅವರ ಹೆಸರು ತಳಕು ಹಾಕಿಕೊಂಡಿದೆ. ರಾಜ್ಯದಲ್ಲಿ ಪ್ರಭಾವಿ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಿ ಕನಿಷ್ಠ ಆ ಸಮುದಾಯದ ಮನ ಗೆಲ್ಲುವ ಅನಿವಾರ್ಯತೆಗೆ ಬಿಜೆಪಿ ತೀರ್ಮಾನಿಸಿದಂತಿದೆ.

LEAVE A REPLY

Please enter your comment!
Please enter your name here