ಮುಖ್ಯಮಂತ್ರಿ ಬದಲಾವಣೆ ಮಾಧ್ಯಮಗಳ ಸೃಷ್ಟಿ : ಸಚಿವ ಅರವಿಂದ ಬೆಲ್ಲದ

0
198
Tap to know MORE!

ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ ಯಡಿಯೂರಪ್ಪನವರ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ನೀಡಬಾರದೆಂದು ಮಾಧ್ಯಮದವರಿಗೆ ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಾಗೂ ಅತಿವೃಷ್ಟಿ ಸಂಕಷ್ಟದಲ್ಲೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಟಿ. ನಮ್ಮ ತಂದೆ (ಚಂದ್ರಕಾಂತ ಬೆಲ್ಲದ) ಐದು ಬಾರಿ ಶಾಸಕರಾದರೂ, ಸಚಿವ ಸ್ಥಾನ ನೀಡಿಲ್ಲವೆಂಬ ಬೇಸರ ಕ್ಷೇತ್ರದ ಜನತೆಗೆ ಇದೆ. ಆದರೆ, ಪಕ್ಷದ ನಾಯಕತ್ವ ವಿಶಿಷ್ಟ ಕಾರ್ಯ ನಿರ್ವಹಣೆ ಮಾಡುತ್ತಿದೆ. ಯಾವಾಗ ಯಾರಿಗೆ ಅವಕಾಶ ಕೊಡಬೇಕೆಂಬುದು ಅವರಿಗೆ ಬಿಟ್ಟಿದೆ ಎಂದರು.

ಇದನ್ನೂ ಓದಿ : ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆ – ನೆರವು ನೀಡುವುದಾಗಿ ಸಿಎಂ ಭರವಸೆ

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಆಕಾಂಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಕಾಂಕ್ಷಿಗಳು ಬಹಳಷ್ಟಿದ್ದಾರೆ. ಪ್ರಸಕ್ತ ಪಕ್ಷ ನನಗೆ ಶಾಸಕ ಸ್ಥಾನದ ಜೊತೆಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ನಮ್ಮ ಪಕ್ಷ ನೀಡಿದ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಶಾಸಕರಾದ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಇದು ಕ್ಷೇತ್ರದ ಜನರ ಆಸೆಯೂ ಹೌದು. ನಾನು ಸಚಿವನಾಗಿ ಮಾಡುವ ಕೆಲಸ ಶಾಸಕನಾಗಿಯೇ ಮಾಡುತ್ತಿರುವೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.

LEAVE A REPLY

Please enter your comment!
Please enter your name here