ಮುಲ್ಕಿ: ತೋಕೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹರಿದಾಸ ಭಟ್ ಆಯ್ಕೆ

0
191
Tap to know MORE!

ಮುಲ್ಕಿ: ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹರಿದಾಸ್ ಭಟ್ ಆಯ್ಕೆಯಾಗಿದ್ದಾರೆ.

ಉಳಿದಂತೆ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಳದ ಅರ್ಚಕ ಮಧುಸೂದನ್ ಆಚಾರ್, ವಿಪುಲ ಡಿ ಶೆಟ್ಟಿಗಾರ್, ಶಾರದಾ ಜಿ ಬಂಗೇರ, ವಿಶ್ವನಾಥ ಸಾಲ್ಯಾನ್, ಲೋಕಯ್ಯ ಸಾಲ್ಯಾನ್, ಬಿ ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ ಆರ್. ಕೋಟ್ಯಾನ್ ಸರಕಾರದಿಂದ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ತೋಕೂರು : “ಸ್ಪೋರ್ಟ್ಸ್ ಕ್ಲಬ್ ನಲ್ಲಿ ತುಡರ್ ಪರ್ಬ -2020” ಆಚರಣೆ

ತೋಕೂರು ಪರಿಸರದಲ್ಲಿ ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿರುವ ಹರಿದಾಸ್ ಭಟ್ ತೋಕೂರು ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು ಅಲ್ಲದೆ ಸ್ಥಳೀಯ ತೋಕೂರು ಯುವಕ ಸಂಘದ ಮಾಜೀ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ಬಹಳಷ್ಟು ಶ್ರಮಿಸಿದ್ದಾರೆ.

ಅವರ ಆಯ್ಕೆಗೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು,ಶಾಸಕ ಉಮನಾಥ ಕೋಟ್ಯಾನ್, ಮಾಜೀ ಸಚಿವ ಅಭಯಚಂದ್ರ ಜೈನ್ ,ಕ.ಸಾ.ಪ.ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಗಿರಿ ಪ್ರಕಾಶ್ ತಂತ್ರಿ ಪೊಳಲಿ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಭಟ್, ಮುಲ್ಕಿ ವಿಜಯ ವಿಜಯ ರೈತ ಸೊಸೈಟಿ ಅಧ್ಯಕ್ಷರಾದ ರಂಗನಾಥ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಜೀರ್ಣೋದ್ಧಾರ ಸಮಿತಿಯ ಸದಸ್ಯ ಗುರುರಾಜ ಎಸ್ ಪೂಜಾರಿ, ಗಜಾನನ ಸ್ಪೋರ್ಟ್ಸ್ ಕ್ಲಬ್ ತೋಕೂರು ಗೌರವಾಧ್ಯಕ್ಷರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು ತೋಕೂರು,ಫೇಮಸ್ ಯೂತ್ ಕ್ಲಬ್ ತೋಕೂರು ಅಧ್ಯಕ್ಷರಾದ ಭಾಸ್ಕರ ಅಮೀನ್, ತೋಕೂರು ಯುವಕ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್, ಮಾಜಿ ಅಧ್ಯಕ್ಷರಾದ ಹೇಮನಾಥ ಅಮೀನ್ , ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮ ಎ ರಾವ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಧರ್ಮಾನಂದ ತೋಕೂರು, ಪ್ರೇಮಲತಾ ಯೋಗೀಶ್, ಉದಯಕುಮಾರ್ ಶೆಟ್ಟಿ ಶಿಮಂತೂರು, ಮುಲ್ಕಿ ಲಯನ್ಸ್ ಕ್ಲಬ್ ಮಾಜೀ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಉದಯ ಅಮೀನ್ ಮಟ್ಟು ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here