ಪಕ್ಷಿಕೆರೆ ಅ.2 : ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್, ನಾಗಬ್ರಹ್ಮ ಭಜನಾ ಮಂಡಳಿ (ರಿ) ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹುದ್ದೂರು ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ಮುಲ್ಲಟ್ಟ ಸಾರ್ವಜನಿಕ ರುದ್ರ ಭೂಮಿಯಲ್ಲಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯದಲ್ಲಿ ಮಾಜಿ ಪಂ.ಅಧ್ಯಕ್ಷರಾದ ಶ್ರೀ ನಾಗೇಶ್ ಬೊಳ್ಳೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಶ್ರೀ ಕೇಶವ್, ರುದ್ರ ಭೂಮಿಯ ಅಧ್ಯಕ್ಷರಾದ ಶ್ರೀ ವೀರಪ್ಪ ಶೆಟ್ಟಿಗಾರ್, ಶ್ರೀ ಹರೀಶ್ ಹೊಸಕಾಡು, ಶ್ರೀ ರಾಜೇಶ್ ಶೆಟ್ಟಿಗಾರ್ ಹೊಸಕಾಡು, ಶ್ರೀ ಸಚಿನ್ ಹೊಸಕಾವೇರಿ, ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಧನಂಜಯ ಪಿ ಶೆಟ್ಟಿಗಾರ್, ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕೆ, ಕಾರ್ಯದರ್ಶಿಯಾದ ಶ್ರೀ ರಾಜೇಶ್ ಶೆಟ್ಟಿಗಾರ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದರು.