ಮೂಡುಬಿದಿರೆ : ಅತ್ಯಾಚಾರಿಗಳಿಗೆ ಫಾಸ್ಟ್ ಟ್ರ್ಯಾಕ್‌ ಕೋರ್ಟ್ ಮೂಲಕ ಕಠಿಣ ಶಿಕ್ಷೆಗೆ ಎಬಿವಿಪಿ ಆಗ್ರಹ

0
155
Tap to know MORE!

ಮೂಡುಬಿದಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಮೂಡಬಿದ್ರೆ ನಗರದ ಬಸು ನಿಲ್ದಾಣದ ಬಳಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯ ಮೇಲೆ  ನಡೆದ ಅಮಾನವೀಯ ಅತ್ಯಾಚಾರ ಪ್ರಕರಣವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಮಹಿಳೆಯರನ್ನು ಪೂಜಿಸುವ ಪರಂಪರೆಯನ್ನು  ಹೊಂದಿರುವ ಜಗತ್ತಿನ ಏಕೈಕ ದೇಶದಲ್ಲಿ ಇಂತಹ ಕ್ರೂರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು  ಅತ್ಯಂತ ದುಃಖಕರ ಮತ್ತು ವಿಷಾದನಿಯ ಸಂಗತಿಯಾಗಿದೆ. ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ  ಅತ್ಯಾಚಾರ ಮತ್ತು  ಕಿರುಕಳದಿಂದಾಗಿ  ಯುವತಿಯು  ಸಾವನ್ನೊಪ್ಪಲು ಕಾರಣರಾದ ಆರೋಪಿಗಳ ವಿಚಾರಣೆಯನ್ನು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸಿ ತಕ್ಷಣವೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

ಪ್ರತಿಭಟನೆಯು ನಡೆದ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಬಿದ್ರೆ ನಗರ ಕಾರ್ಯದರ್ಶಿ ಧನಂಜಯ್ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ  ಶ್ರೀರಾಜ್ ಸನಿಲ್, ಉಪಾಧ್ಯಕ್ಷ ಹೇಮಂತ್ ಪೂಜಾರಿ , ನಗರ ಸಹ ಕಾರ್ಯದರ್ಶಿ  ಆದರ್ಶ್ , ಹರ್ಷಿತ್ – ಬಂಟ್ವಾಳ ತಾಲೂಕ್ ಸಂಚಾಲಕ  ಹಾಗೂ ದಿನೇಶ್ – ಸಹ ಸಂಚಾಲಕ ಹಾಗೂ ಮೂಡಬಿದ್ರೆ ನಗರದ ಹಲವು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here