ಮೂಲ್ಕಿ : ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ – ಇಬ್ಬರ ಬಂಧನ

0
247
Tap to know MORE!

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಬಳಿ ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ನಾಡ್ ಕುದ್ಕಪಲ್ಲ ರಸ್ತೆಯ ಕ್ರಾಸ್ ನಲ್ಲಿ ಮುಲ್ಕಿ ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಇವರು ಸಿಲುಕಿಕೊಂಡಿದ್ದಾರೆ.

ಬಂಧಿತರನ್ನು ಪಕ್ಷಿಕೆರೆ ಸಮಿಪದ ಕೊಯಿಕಾಯಿ ಗುಡ್ಡೆ ನಿವಾಸಿಗಳಾದ ರಂಜನ್ ಶೆಟ್ಟಿ (25) ಮತ್ತು ದೇವಿಪ್ರಸಾದ್ (20) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 350 ಗ್ರಾಂ ಗಾಂಜಾ ಹಾಗೂ ಬೈಕ್ , 2 ಮೊಬೈಲ್ ವಶಪಡಿಸಲಾಗಿದೆ.

ಇದನ್ನೂ ನೋಡಿ : ಅಕ್ರಮವಾಗಿ ಬೆಳೆಸಿದ ಗಾಂಜಾ ಗಿಡಗಳ ವಶ – ಓರ್ವನ ಬಂಧನ

ಮುಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ಜಯರಾಮ ಗೌಡ ಮಾರ್ಗದರ್ಶನದಲ್ಲಿ ಮುಲ್ಕಿ ಎಸ್ಐ ಶೀತಲ್ ಅಲಗೂರು, ಕ್ರೈಂ ಎಸ್ಐ ದೇಜಪ್ಪ, ಎಎಸ್ಐ ಚಂದ್ರಶೇಖರ, ಸಿಬ್ಬಂದಿ ಧರ್ಮೇಂದ್ರ ಮತ್ತಿತರರು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here