ದೇಶದ ಮೊಟ್ಟಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

0
201
Tap to know MORE!

ನವದೆಹಲಿ ಡಿ.28: ದೇಶದ ಮೊಟ್ಟ ಮೊದಲ ಚಾಲಕ-ರಹಿತ ಮೆಟ್ರೋ ರೈಲು ಸಂಚಾರಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ, ದೆಹಲಿ ಮೆಟ್ರೋವಿನ ಮೆಜೆಂತಾ ಲೈನ್​​ನಲ್ಲಿ ಡ್ರೈವರ್​ಲೆಸ್​ ರೈಲಿಗೆ ಹಸಿರು ನಿಶಾನೆ ತೋರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮೊದಲ ಚಾಲಕರಹಿತ ಮೆಟ್ರೋ ರೈಲಿನ ಈ ಉದ್ಘಾಟನೆ ಭಾರತ ಸ್ಮಾರ್ಟ್ ವ್ಯವಸ್ಥೆಗಳತ್ತ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಅಟಲ್ ಜೀ ಅವರ ಪ್ರಯತ್ನದಿಂದ ದೇಶದ ಮೊದಲ ಮೆಟ್ರೋವನ್ನು ಪ್ರಾರಂಭಿಸಲಾಯಿತು. 2014ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ 5 ನಗರಗಳು ಮಾತ್ರ ಮೆಟ್ರೋ ಸೇವೆ ಹೊಂದಿದ್ದವು. ಇಂದು 18 ನಗರಗಳು ಮೆಟ್ರೋ ಸೇವೆಯನ್ನು ಹೊಂದಿವೆ. 2025ರ ವೇಳೆಗೆ ನಾವು ಈ ಸೇವೆಯನ್ನು 25ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಿದ್ದೇವೆ ಎಂದು ಮೋದಿ ಹೇಳಿದರು.

ಇನ್ನಷ್ಟು ಓದಿ: ಜಮ್ಮು ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್ – “ಪಿಎಂ-ಜೆಎವೈ ಸೇಹತ್” ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಇದೇ ವೇಳೆ ಪ್ರಧಾನಿ, ಏರ್ಪೋರ್ಟ್​ ಎಕ್ಸ್​​ಪ್ರೆಸ್​ ಲೈನ್​ನಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೇವೆಯನ್ನ​ ಲೋಕಾರ್ಪಣೆ ಮಾಡಿದರು. ಈ ಸೇವೆಯಡಿ ಪ್ರಯಾಣಿಕರು, ಕಳೆದ 18 ತಿಂಗಳಲ್ಲಿ 23 ಬ್ಯಾಂಕುಗಳು ನೀಡಿರುವ ರುಪೇ-ಡೆಬಿಟ್ ಕಾರ್ಡ್ ಹೊಂದಿದ್ದರೆ, ಅದನ್ನ ಸ್ವೈಪ್ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸಬಹುದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ದೇಶದ ಯಾವುದೇ ಭಾಗದ ಪ್ರಯಾಣಿಕರು ಇನ್ಮುಂದೆ ಈ ಕಾರ್ಡ್ ಬಳಸಿ ದೆಹಲಿಯ ಏರ್ಪೋರ್ಟ್​ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಲು ಅವಕಾಶವಿದೆ. ಈ ಸೌಲಭ್ಯ 2022ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್‌ವರ್ಕ್‌ನಲ್ಲಿ ಲಭ್ಯವಾಗಲಿದೆ ಎಂದು ದೆಹಲಿ ಮೆಟ್ರೋ ರೇಲ್ ಕಾರ್ಪೊರೇಷನ್​ನ ವಕ್ತಾರರು ಖಚಿತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭಾಗಿಯಾಗಿದ್ದರು.

72ನೇ ಮನ್ ಕೀ ಬಾತ್: ರಾಜ್ಯದ ಶ್ರೀರಂಗಪಟ್ಟಣ, ಯುವ ಬ್ರಿಗೇಡ್ ಮತ್ತು ಒಂದು ಯುವ ದಂಪತಿಯನ್ನು ಉಲ್ಲೇಖಿಸಿದ ಮೋದಿ..!

LEAVE A REPLY

Please enter your comment!
Please enter your name here