BIG NEWS| ಕೇರಳದ ರಾಜಧಾನಿಯ ಮೇಯರ್ ಆಗಿ 21 ವರ್ಷದ B.Sc ವಿದ್ಯಾರ್ಥಿನಿ ಆಯ್ಕೆ!

0
67

ತಿರುವನಂತಪುರಂ ಡಿ 25: ಮುದವನ್ಮುಕಲ್ ವಾರ್ಡ್‌ನಿಂದ ಗೆದ್ದ ಸಿಪಿಐ (ಎಂ) ಅಭ್ಯರ್ಥಿ, 21 ವರ್ಷದ ಆರ್ಯ ರಾಜೇಂದ್ರನ್ ಕೇರಳ ರಾಜಧಾನಿಯ ಹೊಸ ಮೇಯರ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಸಿಪಿಐ (ಎಂ) ಜಿಲ್ಲಾ ಸಮಿತಿಯು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದ ನಂತರ ಶುಕ್ರವಾರ ಸಭೆ ನಡೆಸಿ, ಆರ್ಯ ಅವರ ಹೆಸರನ್ನು ಮುಂದಿನ ಮೇಯರ್ ಆಗಿ ಶಿಫಾರಸು ಮಾಡಿದೆ. ರಾಜ್ಯ ಸಮಿತಿಯು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ ಮತ್ತು ಅವರು ಜಿಲ್ಲಾ ಸಮಿತಿಯ ಶಿಫಾರಸನ್ನು ಒಪ್ಪಿಕೊಂಡರೆ, ಆರ್ಯ ಬಹುಶಃ ಈ ಹುದ್ದೆಗೆ ನೇಮಕಗೊಂಡ ಭಾರತದ ಅತ್ಯಂತ ಕಿರಿಯ ವ್ಯಕ್ತಿಯಾಗಬಹುದು.

ಆರ್ಯ, ಪ್ರಸ್ತುತ ಸಿಪಿಐ (ಎಂ) ಗೆ ಅಂಗಸಂಸ್ಥೆಯಾಗಿರುವ ಬಾಲ ಸಂಘಟನೆಯಾದ ಬಾಲಸಂಗಂ ಇದರ ರಾಜ್ಯ ಅಧ್ಯಕ್ಷರಾಗಿದ್ದಾರೆ. ಸಿಪಿಐ(ಎಂ) ನ ವಿದ್ಯಾರ್ಥಿ ಸಂಘಟನೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ರಾಜ್ಯ ಸಮಿತಿ ಸದಸ್ಯೆಯೂ ಆಗಿದ್ದಾರೆ. ಆರ್ಯ ಪ್ರಸ್ತುತ ನಗರದ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.

ಇದನ್ನೂ ಓದಿ: ಗುಜರಾತ್: ಸಾವಿಗೂ ಮುನ್ನ, ಏಳು ಮಕ್ಕಳ ಪ್ರಾಣ ಉಳಿಸಿದ ಎರಡುವರೆ ವರ್ಷದ ಮಗು!!

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ಸಮಯದಲ್ಲಿ, ಆರ್ಯ, “ನಾನು ಮಕ್ಕಳ ಸಂಘಟನೆಯಿಂದ ಬರುತ್ತಿದ್ದು, ವಾರ್ಡ್‌ನಲ್ಲಿ ಕೆಳ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸುವತ್ತ ಗಮನ ಹರಿಸುತ್ತೇನೆ” ಎಂದು ತಿಳಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳು – ಒಜಿ ಒಲೀನಾ ಮತ್ತು ಎಸ್ ಪುಷ್ಪಲತಾ ಅವರನ್ನು ಮೇಯರ್ ಅಭ್ಯರ್ಥಿಗಳನ್ನಾಗಿ ನಿರೀಕ್ಷಿಸಲಾಗಿತ್ತು. ಆದರೆ, ಕುಂಕುಝಿ ವಾರ್ಡ್‌ನಲ್ಲಿ ಒಲೀನಾ ಸೋತರೆ, ನೆಡುಂಗಡ್ ವಾರ್ಡ್‌ನಲ್ಲಿ ಪುಷ್ಪಲತಾ ಅವರು ಸೋತರು.

ಮೀಸಲಾತಿ ನಿಯಮಗಳ ಪ್ರಕಾರ ಆರ್ಯ ಅವರನ್ನು ಮೇಯರ್ ಹುದ್ದೆಗೆ ನೇಮಿಸಬಹುದು. ಕೇರಳದ ಸ್ಥಳೀಯ ಸಂಸ್ಥೆಗಳಲ್ಲಿ, ಐವತ್ತು ಪ್ರತಿಶತ ಸೀಟುಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದೆ.

15 ವರ್ಷದ ಇಂಡೋ-ಅಮೇರಿಕನ್ ಗೀತಾಂಜಲಿ ರಾವ್ ಟೈಮ್ಸ್ “ಕಿಡ್ ಆಫ್ ದ ಇಯರ್” ಆಗಿ ಆಯ್ಕೆ

LEAVE A REPLY

Please enter your comment!
Please enter your name here