ಕತ್ತಲೆಯ ಬಸಿರ ಸೀಳಿದ ಬೆಳಕು ರಸ್ತೆಯುದ್ದಕೂ ಹಾದುಹೋಗುವಾಗಲೂ
ಫಕ್ಕನೆ ಧೃಗ್ಗೋಚರವಾಗಿ ಮಾಯವಾಗುವುದು
ಮೈಲಿ ಕಲ್ಲು.
ಗುರಿಯೆಡೆಗೆ ದೃಷ್ಟಿಹೊರಳಿಸೆನ್ನುವುದು.ಬಿಸಿಲುಗುದುರೆಯಂತೆ ಫಳಫಳ ಹೊಳೆವ ಕಡುಕಪ್ಪು ರಸ್ತೆ.
ವೇಗವನ್ನೂ ಮೀರಿದ ಆಯಾಸ ತರುತ್ತಿದ್ದರೂ
ಕಣ್ಣಿಗೆ ಬೀಳುವುದು ಓಯಸಿಸ್ಸಿನಂತೆ
ಮೈಲಿ ಕಲ್ಲು! ದಾರಿಸರಿಯಿದೆಯೆಂದು ತಂಪನೆರೆಯುವುದು.ವೇಗವರ್ಧಕವನೊತ್ತಿ ರಾಕೆಟಿನ ವೇಗ,
ಗುರಿತಲುಪಲೇಬೇಕು ಎಂಬಾವೇಗ,
ನೋಡುತ್ತ ನಿಲ್ಲಲು ಇಲ್ಲಾರಿಗೂ ಪುರುಸೊತ್ತಿಲ್ಲ!!ಮೈಲಿಕಲ್ಲಿಗಿದು ಗೊತ್ತಿಲ್ಲದ್ದಲ್ಲ!!!
ವ್ಯವಹಾರವೋ,ಉದ್ದಿಮೆಯೋಸಂಬಳವೋ,ಸಂಬಂಧವೋ,ಹೋಗುವವರ ಬೆನ್ನುತಟ್ಟಿ ಕಳಿಸುವುದು,
ಹೊಸಬರ ನಿರೀಕ್ಷೆಯಲಿ ತಾನು ನಿಂತೇಯಿರುವುದು.ಬೀದಿಗೆಲ್ಲ ತೋರಣ,ಊರಿಗೆಲ್ಲ ಸಿಂಗಾರ,
ಬಣ್ಣಬಣ್ಣದ ಬೆಂಗಳೂರೇ ನಮಗೆಲ್ಲ ಬಂಗಾರ.ಮೈಲಿಕಲ್ಲಿಗೆಲ್ಲಿಹುದು ಈ ಬಗೆಯ ಬಿನ್ನಾಣ?
ಕಪ್ಪು ಬಿಳುಪು ಎರಡೇಬಣ್ಣ.
ನಮ್ಮನಮ್ಮ ಮನೆಯಲ್ಲಿ ನಮಗೊಬ್ಬ ಅಣ್ಣ!!!-ಹರೀಶ್ ಟಿ.ಜಿ