ಮೈಸೂರು ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ನಿಯೋಜನೆ | ಇವರ ಪತ್ನಿ ಮಂಡ್ಯದ ಜಿಲ್ಲಾಧಿಕಾರಿ

0
80
Tap to know MORE!

ಮೈಸೂರಿನ ನೂತನ‌ ಜಿಲ್ಲಾಧಿಕಾರಿಯಾಗಿ ಡಾ ಬಗಾದಿ ಗೌತಮ್ ನಿಯೋಜನೆಗೊಂಡಿದ್ದಾರೆ. ಇದು ಒಂದು ರೀತಿ ವಿಶೇಷವಾಗಿದೆ. ಏಕೆಂದರೆ ಇದೇ ವೇಳೆ ಡಾ ಬಗಾದಿ ಗೌತಮ್ ಅವರ ಪತ್ನಿ ಎಸ್ ಅಶ್ವಥಿ ಪಕ್ಕದ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವರ್ಗಾವಣೆಗೆ ಆದೇಶ!

ಈ ಹಿಂದೆಯೂ ಮೈಸೂರು, ಮಂಡ್ಯ ಜಿಲ್ಲೆ ಇಂತಹದ್ದೇ ವಿಶೇಷ ಸನ್ನಿವೇಶಕ್ಕೆ‌ ಸಾಕ್ಷಿಯಾಗಿತ್ತು.  ಆಗ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಸಿ ಶಿಖಾ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಡಾ ಎಂ ಎನ್ ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮತ್ತೊಂದು ವಿಶೇಷ ಅಂದರೆ ಡಾ.ಎಂ.ಎನ್.ಅಜಯ ನಾಗಭೂಷಣ್ ಹಾಗೂ ಡಾ ಬಗಾದಿ ಗೌತಮ್ ಇಬ್ಬರು ವೈದ್ಯಕೀಯ ಶಿಕ್ಷಣ ಪಡೆದವರಾಗಿದ್ದಾರೆ.

LEAVE A REPLY

Please enter your comment!
Please enter your name here