ಪ್ರಸ್ತುತ ಜೀವನದ ಭಾಗವೆಂದೆ ಎನ್ನುವರು
ಇದು ಇದ್ದರೆ ಮಾತ್ರ ಗೌರವ ಹೇಳುವರು
ಪ್ರಶ್ನೆಗಳಿಗೆ ಆಪ್ಲಿಕೇಶನ್ಗಳು ಉತ್ತರಿಸುವರು
ಸ್ವಲ್ಪ ಮೈ ಮರೆತರೆ ಅಪಾಯವ ಎಳೆಯುವರು

ಮೊಬೈಲ್ ಮಾರಕವೆಂದು ಗುಡುಗುವರು
ಎಲ್ಲವನ್ನೂ ಅದರಲ್ಲಿಯೇ ಕಳಿಸುವರು
ಗೂಗಲ್, ಯೂಟ್ಯುಬ್ ಬಳಸುವರು
ವಿಷಯಗಳ ಆಗರ ಎಂದೆನ್ನುವರು

ಮೊಬೈಲ್ ಮುಟ್ಟಬೇಡಿ ಭಾಷಣ ಮಾಡುವರು
ಅವರೇ ಆನ್‌ಲೈನ್ ಕ್ಲಾಸು ಶುರುಮಾಡಿದರು
ಕಾಲ ಬದಲಾಗಿದೆ ಎಂದು ತೇಪೆ ಹಚ್ಚುವರು
ಪರಿಸ್ಥಿತಿಯ ಕೈ ಗೊಂಬೆಯಾಗಿ ಬಿಡುವರು

ವಾಟ್ಸಪ್, ಇನ್ಸ್ಟ ಗ್ರಾಮ್, ಫೇಸ್ ಬುಕ್ ಎಲ್ಲಾವು
ಕೇವಲ ಆಕರ್ಷಣೆ ಎಂದು ಕೊಚ್ಚುವರು
ತಮ್ಮೊಳಗಿನ ಪ್ರತಿಭೆಯ ಅನಾವರಣವು
ಇದರಿಂದ ಸಾಧ್ಯವೆಂದು ಮೆಚ್ಚುವರು

ಸಂಬಂಧಗಳ ದೂರ ಮಾಡಿತೆಂದು ದೂರುವರು
ಎಲ್ಲಾರೂ ಜಂಗಮವಾಣಿಗೆ ತಲೆಬಾಗುವರು
ಸಮಯ ಬದಾಲಾಯಿಸಿತೆಂದು ನುಡಿಯುವರು
ಹಲವರು ಮೋಸಮಾಡಲೇಂದೇ ಇರುವರು

ಅಖಿಲಾ
ವಿಶ್ವವಿದ್ಯಾಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here