ನಾಳೆಯಿಂದ (ಅ.೧) ಹೊಸ ಮೋಟಾರು ವಾಹನ ನಿಯಮಗಳು ಜಾರಿಗೆ

0
199
ಮೋಟಾರು ವಾಹನ, ನೂತನ ನಿಯಮ, ಸುದ್ದಿವಾಣಿ
Tap to know MORE!

ನವದೆಹಲಿ ಸೆ.೩೦: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು ಈ ಮೂಲಕ ಕೆಲವೊಂದು ನಿಯಮಗಳನ್ನು ಮಾರ್ಪಾಡು ಮಾಡಿದೆ. ಅಕ್ಟೋಬರ್‌ 1 ರಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಳ್ಳಲಿವೆ.

ದೇಶದಲ್ಲಿನ ಸಾರಿಗೆ ನಿಯಮಗಳನ್ನು ಪರಿಷ್ಕರಿಸಲು ಮತ್ತು ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸಲು ಸಂಚಾರ ನಿಯಮ ಉಲ್ಲಂಘನೆ ಮತ್ತು ತಂತ್ರಜ್ಞಾನದ ಉನ್ನತೀಕರಣದಂತಹ ದಂಡಗಳ ಹಂತಗಳನ್ನು ಸುಧಾರಿಸಲು ಮೋಟಾರು ವಾಹನ ಕಾಯ್ದೆಯನ್ನು ಒಂದು ವರ್ಷದ ಹಿಂದೆ ಜಾರಿಗೆ ತರಲಾಯಿತು.

ಇದನ್ನೂ ನೋಡಿ: ಅ.೧ ರಿಂದ ಪ್ಯಾಕ್‌ ಮಾಡದ ತಿಂಡಿಗಳಿಗೂ ಇರಲಿದೆ ಎಕ್ಸ್‌ಪೈರಿ ಡೇಟ್!

ಮೋಟಾರು ವಾಹನ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ:

  • ವಾಹನ ಚಾಲೆ ಮಾಡುವಾಗ, ಮೊಬೈಲ್ ಫೋನ್‌ಗಳನ್ನು ಕೇವಲ ಹೋಗುತ್ತಿರುವ ದಾರಿ ಅಥವಾ ಮಾರ್ಗವನ್ನು ನೋಡಲು ಮಾತ್ರ ಬಳಸಬಹುದು. ಈ ಸಮಯದಲ್ಲಿ ಚಾಲಕರು ಚಾಲನೆ ಮಾಡುವಾಗ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳದಿದ್ದಲ್ಲಿ ಮಾತ್ರ ಇದಕ್ಕೆ ಅವಕಾಶ!
  • ಇನ್ನು ಮುಂದೆ ವಾಹನ ದಾಖಲೆಗಳ ಪತ್ರಿಕಾ ಸ್ವರೂಪ (ಹಾರ್ಡ್‌ ಕಾಪಿ) ಇರುವುದು ಕಡ್ಡಾಯವಲ್ಲ. ವಿದ್ಯನ್ಮಾನವಾಗಿ, ಡಿಜಿಟಲ್‌ ರೂಪದಲ್ಲಿ ಮೊಬೈಲ್‌ ಫೋನ್‌ ಮೂಲಕವೇ ತೋರಿಸಬಹುದು. ಯಾವುದೇ ಅಪರಾಧ ಪ್ರಕರಣದಲ್ಲಿ ಸಿಲುಕಿದರೂ, ಡಿಜಿಟಲ್‌ ದಾಖಲೆಗಳನ್ನೇ ತೋರಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.
  • ವಾಹನ ಪರವಾನಗಿ ಅನರ್ಹತೆಯ ವಿವರಗಳನ್ನು ಕಾಲಾನುಕ್ರಮದಲ್ಲಿ ಪೋರ್ಟಲ್‌ನಲ್ಲಿ ನವೀಕರಿಸಲಾಗುತ್ತದೆ.
  • ವಾಹನ ಸವಾರರ ಚಾಲನಾ ಪರವಾನಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಂಚಾರಿ ಅಧಿಕಾರಿಗಳ ಬಳಿ ಲಭ್ಯವಾಗಲಿವೆ. ಪರವಾನಿಗೆ ಪ್ರಾಧಿಕಾರವು ಅನರ್ಹಗೊಳಿಸಿದ ಅಥವಾ ರದ್ದುಪಡಿಸಿದ ಚಾಲನಾ ಪರವಾನಿಗೆಯ ವಿವರಗಳನ್ನು ಅಧಿಕೃತ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದಲ್ಲದೇ ಅದನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.
  • ಚಾಲಕರು ತಮ್ಮ ವಾಹನ ದಾಖಲೆಗಳನ್ನು ಕೇಂದ್ರ ಸರ್ಕಾರಗಳ ಆನ್‌ಲೈನ್ ಪೋರ್ಟಲ್‌ನಲ್ಲಿ ಡಿಜಿಲಾಕರ್ ಅಥವಾ ಎಂ-ಪರಿವಾಹನ್ ನಲ್ಲಿ ನಿರ್ವಹಿಸಲು ಅನುಮತಿ ಇದೆ.
  • ಈ ತಿದ್ದುಪಡಿಗಳು ಸಂಚಾರ ನಿಯಮಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಜಾರಿಗೊಳಿಸುತ್ತವೆ ಮತ್ತು ನಿಯಮಬದ್ಧವಾಗಿ ಮೇಲ್ವಿಚಾರಣೆ ಮಾಡುತ್ತವೆ. ಇದು ಚಾಲಕರ ಕಿರುಕುಳ ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ಸರ್ಕಾರ ಹೇಳಿದೆ.
  • ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

LEAVE A REPLY

Please enter your comment!
Please enter your name here