VIDEO : ಫೆವಿಕಾಲ್ ಜಾಹೀರಾತಿನಲ್ಲಿ ಯಕ್ಷಗಾನದ ಅಪಚಾರ – ಕಲಾಪ್ರೇಮಿಗಳ ಆಕ್ರೋಶ!

0
85

ಮಂಗಳೂರು(ನ.22): ಫೆವಿಕಾಲ್‌ ಸಂಸ್ಥೆಯ​ವರು ತಮ್ಮ ಅಂಟಿ​ನ ಉತ್ಪ​ನ್ನದ ಟಿ.ವಿ.​ಜಾ​ಹೀ​ರಾ​ತಿ​ನಲ್ಲಿ ಯಕ್ಷ​ಗಾ​ನದ ದೃಶ್ಯ​ಗ​ಳನ್ನು ಅನು​ಚಿ​ತ​ವಾಗಿ ಬಳ​ಸಿ​ದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ನೋಡಿ: #BoycottTanishq ಟ್ರೆಂಡಿಂಗ್ – ವಿವಾದಿತ ಜಾಹಿರಾತನ್ನು ಕೆಳಗಿಳಿಸಿದ ತನಿಷ್ಕ್!

ಶನಿವಾರ ಈ ಜಾಹೀ​ರಾ​ತಿನ ತುಣುಕು ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದ್ದು, ಇದು ಯಕ್ಷ​ಗಾ​ನದ ಆಶ​ಯ​ಗ​ಳಿಗೆ ವಿರು​ದ್ಧ​ವಾ​ಗಿದ್ದು, ಯಕ್ಷಗಾನ​ವನ್ನು ಅವ​ಹೇ​ಳ​ನ​ಕಾ​ರಿ​ಯಾಗಿ ಬಳ​ಸ​ಲಾ​ಗಿದೆ ಎಂದು ಅಭಿಪ್ರಾಯ ವ್ಯಕ್ತ​ವಾ​ಗಿ​ದೆ.

ಕಥಕ್ಕಳಿಯ ಹಿಮ್ಮೇಳದ ಸದ್ದು, ಯಕ್ಷಗಾನದ ರಂಗಸ್ಥಳದಲ್ಲಿ ತೆಂಕಿತಿಟ್ಟಿನ ಪ್ರದರ್ಶನ ಆರಂಭ, ಇದೇ ವೇಳೆ ರಂಗಸ್ಥಳದ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಅದು ಕುಸಿದು ಬೀಳುತ್ತದೆ. ಆಗ ಸಿಟ್ಟಿನಿಂದ ವೇಷಧಾರಿ ಅರಚುತ್ತಾ ಎದುರು ವೇಷಧಾರಿ ಸಹಿತ ಹಿಮ್ಮೇಳದವರನ್ನು ಅಟ್ಟಾಡಿಸುತ್ತಾನೆ.

Fevicol !! #apologize

Yakshagana is CENTURIES old tradition of Tulunad. Your Company mocking it is distasteful. It is…

Posted by Vedavyas Kamath on Saturday, 21 November 2020

ಈ ಮೂಲಕ ಸಂಸ್ಥೆಯ ಅಂಟಿನ ಉತ್ಪ​ನ್ನಕ್ಕೆ ಯಾವುದೂ ಸರಿಸಾಟ ಇಲ್ಲ ಎಂಬುದನ್ನು ಸಾರುವ ಪ್ರಯತ್ನ ನಡೆಸಲಾಗಿದೆ. ಜಾಹೀ​ರಾ​ತಿ​ನಲ್ಲಿ ಕಾಣಿ​ಸಿ​ಕೊಂಡ ಕಲಾ​ವಿ​ದರ ಪೈಕಿ ಕೆಲ​ವರು ವೃತ್ತಿಪರ ಕಲಾವಿದರು ಎಂದು ನೆಟ್ಟಿ​ಗರು ಗುರು​ತಿ​ಸಿ​ದ್ದಾರೆ. ಜಾಹಿರಾತನ್ನು ಕೂಡಲೇ ನಿರ್ಬಂಧಿಸುವಂತೆ ಕಲಾಪ್ರೇಮಿಗಳು ಆಗ್ರಹಿಸಿದ್ದಾ​ರೆ.

LEAVE A REPLY

Please enter your comment!
Please enter your name here