BIG NEWS| ರಾಜೀನಾಮೆ ನೀಡಿದ ಸಿಎಂ ಯಡಿಯೂರಪ್ಪ | ಮುಂದಿನ ಮುಖ್ಯಮಂತ್ರಿ ಬಗ್ಗೆ ಎದ್ದಿದೆ ಕುತೂಹಲ

0
478
Tap to know MORE!

ಬೆಂಗಳೂರು : ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅಮಿತ್ ಶಾಗೆ, ಜೆಪಿ ನಡ್ಡಾ ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 75 ವರ್ಷ ದಾಟಿದಂತ ಯಾರಿಗೂ ದೇಶದಲ್ಲಿ ಎಲ್ಲಿಯೂ ಬಿಜೆಪಿ ಪಕ್ಷ ಅಧಿಕಾರ ನೀಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ್ದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಹಿಂದೆ 2 ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕು ಎಂಬುದಾಗಿ ತೀರ್ಮಾನಿಸಿದ್ದೆ. ಆದ್ರೇ ಆ ಸಂದರ್ಭದಲ್ಲಿ ನೀಡೋದು ಸರಿಯಲ್ಲ ಎಂಬುದಾಗಿ ತಿಳಿಸಿದ್ದರು. ಹೀಗಾಗಿ ಇಂದು 2 ವರ್ಷ ಬಿಜೆಪಿ ಸರ್ಕಾರಕ್ಕೆ ತುಂಬಿದ ಸಂದರ್ಭದಲ್ಲಿ ನೀಡಿದ್ದೇನೆ. ನನಗೆ ಇಲ್ಲಿಯವರೆಗೆ ಸಹಕಾರ ನೀಡಿದಂತ ಎಲ್ಲರಿಗೂ ಧನ್ಯವಾದಗಳು. ರಾಜ್ಯದ ಜನರಿಗೆ, ಶಿಕಾರಿಪುರ ಕ್ಷೇತ್ರದ ನನ್ನ ಜನತೆಗೆ ಧನ್ಯವಾದಗಳು ಎಂಬುದಾಗಿ ಹೇಳಿದರು.

ನಾನು ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಯಾರನ್ನು ಸೂಚಿಸಿಲ್ಲ. ನನಗೆ ಎಲ್ಲಾ ರೀತಿಯ ಸ್ಥಾನಮಾನವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ನನ್ನ ರಾಜೀನಾಮೆಯನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂಬುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here