ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಒಂದು ವಾರ ಲಾಕ್ ಡೌನ್.. ಯಾವುದೇ ಸಭೆ ಸಮಾರಂಭಕ್ಕೆ ಅವಕಾಶವಿಲ್ಲ. ಕಾರ್ಯಕ್ರಮಗಳನ್ನು ಕೂಡ ರದ್ದು ಪಡಿಸಲಾಗಿದೆ. ನಾಳೆಯಿಂದ ಒಂದು ವಾರ ಸಂಪೂರ್ಣ ಲಾಕ್ ಡೌನ್ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿಯ ವೀಡಿಯೋ ಈಗ ವೈರಲ್ ಆಗಿದೆ. ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಲಿದ್ಯಾ ಎನ್ನುವ ಗೊಂದಲಕ್ಕೂ ಅನೇಕರು ಒಳಗಾಗಿದ್ದಾರೆ. ಆದ್ರೇ.. ಈ ವೀಡಿಯೋ ಹಿಂದಿನ ಅಸಲಿ ಕತೆ ಏನ್ ಅಂತ ಮುಂದೆ ಓದಿ
ಈಗ ಸೋಷಿಯಲ್ ಮೀಡಿಯಾಗಳಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಂದು ವಾರ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ ಎಂಬ ವೀಡಿಯೋ ಒಂದು ವೈರಲ್ ಆಗಿದೆ.
ಖಾಸಗಿ ಸುದ್ದಿ ಸಂಸ್ಥೆಯೊಂದರ ಆ ವೀಡಿಯೋ ನೋಡಿದಂತ ಪ್ರತಿಯೊಬ್ಬರು, ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಮತ್ತೆ ಜಾರಿಯಾಗಲಿದ್ಯಾ ಎನ್ನುವ ಗೊಂದಲಕ್ಕೂ ಒಳಗಾಗುವಂತೆ ಮಾಡಿದೆ.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ವೀಡಿಯೋ ಯಾವತ್ತು ಪ್ರಕಟ ಆಗಿರೋದು ಎನ್ನುವ ಪರಿಶೀಲನೆಯನ್ನು ನಡೆಸಿದಾಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸುದ್ದಿಗೋಷ್ಠಿಯ ವೈರಲ್ ವೀಡಿಯೋ, ಇವತ್ತಿನದಲ್ಲ. ಬದಲಾಗಿ ಅದು ರಾಜ್ಯದಲ್ಲಿ ಕೊರೋನಾ ಆರ್ಭಟಕ್ಕೂ ಮುನ್ನಾ ಮಾರ್ಚ್ 23ರಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ, ಲಾಕ್ ಡೌನ್ ಘೋಷಣೆ ಮಾಡಿದಂತ ವೀಡಿಯೋ ಆಗಿದೆ. ಇಂತಹ ವೀಡಿಯೋ, ಈಗ ನಾಳೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಎಂಬುದಾಗಿ ವೈರಲ್ ಆಗುತ್ತಿದೆ.
ಅಂದಹಾಗೇ, ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್ ಡೌನ್ ಬಗ್ಗೆ ಅಂದು ಘೋಷಣೆ ಮಾಡಿದ್ದಲ್ಲದೇ, ಸಿಎಂ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ, ‘ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ ಕಳೆದ ವರ್ಷ ಮಾರ್ಚ್ 23ರಿಂದ 31ರ ವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ . ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ’ ಎಂಬುದಾಗಿಯೂ ತಿಳಿಸಿದ್ದರು.