ಹಳೆಯಂಗಡಿ : ಯತೀಶ್ ಕೋಟ್ಯಾನ್ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾಗಿ ನೇಮಕ

0
322
Tap to know MORE!

ಹಳೆಯಂಗಡಿ : ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯು ಭಾನುವಾರ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಮಂಡಲದ ಅಧ್ಯಕ್ಷ ಸುಧಾಕರ ಅಮೀನ್ ಸಭೆಯ ಅಧ್ಯಕ್ಷತೆ ವಹಿಸಿದರು.

2020-21 ಸಾಲಿಗೆ ನೂತನ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿಕೋಸ್ಟಾ ನೆರವೇರಿಸಿದರು. ಯುವಕ ಮಂಡಲದ ಕಾರ್ಯಕಾರಿ ಸಮಿತಿಗೆ ಒಟ್ಟು 19 ಸದಸ್ಯರನ್ನು ಆಯ್ಕೆ ಮಾಡಿ, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಗೆ ಟ್ರಸ್ಟಿನ ಪ್ರದಾನ ಕಾರ್ಯದರ್ಶಿ ಸೇರಿಸಿ 13 ಮಂದಿಯ ಸಲಹಾ ಸಮಿತಿಯನ್ನು ರಚಿಸಲಾಯಿತು.

ಮಂಡಲದ ಪ್ರಧಾನ ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಕೋಶಾಧಿಕಾರಿ ಪ್ರಾಣೇಶ ರಾವ್, ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿಕೋಸ್ಟಾ ಉಪಸ್ಥಿತರಿದ್ದರು.

ಕಿರಣ್ ರಾಜ್ ಬಿ. ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಸ್ವಾಗತಿಸಿ, 2019-20 ರ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಮಂಡಲದ ಕೋಶಾಧಿಕಾರಿ ಪ್ರಾಣೇಶ್ ರಾವ್ 2019-20 ರ ಸಾಲಿನ ವಾರ್ಷಿಕ ಆಯಾ – ವ್ಯಯ ಪಟ್ಟಿ ಹಾಗೂ ಲೆಕ್ಕ ಪರಿಶೋಧಕರ ವರದಿ ಮಂಡಿಸಿದರು.

2020-21 ರ ಸಾಲಿನ ನೂತನ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳು

ಅಧ್ಯಕ್ಷರು – ಯತೀಶ್ ಕೋಟ್ಯಾನ್
ಉಪಾಧ್ಯಕ್ಷರು – ನಾಗೇಶ್ ಟಿ ಜಿ.
ಗೌ. ಪ್ರಧಾನ ಕಾರ್ಯದರ್ಶಿ – ಸುನಿಲ್ ಪಾವಂಜೆ
ಜೊತೆ ಕಾರ್ಯದರ್ಶಿ – ಇಂದುಧರ ಕಿಣಿ
ಕೋಶಾಧಿಕಾರಿ – ಪ್ರಾಣೇಶ ರಾವ್
ಸಾಂಸ್ಕೃತಿಕ ಕಾರ್ಯದರ್ಶಿ – ಲೋಕೇಶ್ ಚಿಲಿಂಬಿ.

ಕಾರ್ಯಕಾರಿ ಸಮಿತಿ :
ಸುಧಾಕರ ಆರ್ ಅಮೀನ್, ದಾಮೋದರ ಗೊಳಿದಡಿ,ಮೋಹನ್ ಆರ್. ಅಮೀನ್, ಹನುಮಂತ ಡೀ. ಪೂಜಾರ್ ರಾಮನಗರ, ತಾರಾನಾಥ ಕೊಳುವೈಲು, ಪ್ರವೀಣ್ ಆಚಾರ್ಯ, ರೋಹಿತ್ ಕೊಳುವೈಲು, ಶಿವರಾಜ್ ಕೊಳುವೈಲು, ರಾಝಿಕ್ ಗೋಳಿದಡಿ, ಮನೋಜ್ ಕೆಲೆಸಿಬೆಟ್ಟು, ನಿಶಾಂತ್ ಕೊಪ್ಪಲ, ಕೃಷ್ಣ

ಸಲಹಾ ಸಮಿತಿ : 
ಅಧ್ಯಕ್ಷರು – ಸದಾಶಿವ ಅಂಚನ್ ಚಿಲಿಂಬಿ,
ಸದಸ್ಯರು – ಎಸ್. ಎಚ್. ಶೆಟ್ಟಿಗಾರ್, ಶ್ರೀ. ರಮೇಶ್ ಕೋಟ್ಯಾನ್, ಜೀವನ್ ಪ್ರಕಾಶ್ ಕಾಮೆರೊಟ್ಟು, ರಾಮದಾಸ್ ಪಾವಂಜೆ, ಮೋಹನ್ ಬಂಗೇರ, ನಾರಾಯಣ ರಾವ್ ರಾಮನಗರ, ಮಹಾಬಲ ಅಂಚನ್, ಪಲಿಮಾರು ಜಗದೀಶ್ ಪಾವಂಜೆ
ಹರೀಶ್ ಸಾಲ್ಯಾನ್, ವಿನೋದ್ ಕುಮಾರ್ ಕೊಳುವೈಲು, ಸೋಮನಾಥ ದೇವಾಡಿಗ, ಸ್ಟ್ಯಾನಿ ಡೀ ಕೋಸ್ಟಾ

LEAVE A REPLY

Please enter your comment!
Please enter your name here