2020-21 ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ ಯುಜಿಸಿ

0
300
Tap to know MORE!

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ನವೆಂಬರ್ 1 ರಿಂದ ಪ್ರಥಮ ವರ್ಷದ ಪದವಿ ತರಗತಿಗಳನ್ನು ಪ್ರಾರಂಭಿಸುವಂತೆ ನಿರ್ದೇಶನ ನೀಡಿದೆ. ಹಾಗೆಯೇ, ಹೊಸ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ.

ಯುಜಿಸಿ ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಅಕ್ಟೋಬರ್ 30 ರ ನಂತರ ಯಾವುದೇ ವಿಶ್ವವಿದ್ಯಾಲಯಗಳು ಹೊಸ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವುದನ್ನು ನಿರ್ಬಂಧಿಸಿದೆ.

ಯುಜಿಸಿ, ಶೈಕ್ಷಣಿಕ ಕ್ಯಾಲೆಂಡರ್
2020-21ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್

ಕ್ಯಾಲೆಂಡರ್‌ನಲ್ಲಿ ಉಲ್ಲೇಖವಿರುವ ದಿನಾಂಕಗಳು
● ಅ.30, 2020 – ಪ್ರವೇಶಾತಿ ಪ್ರಕ್ರಿಯೆ ಪೂರ್ಣ
● ನ.1, 2020 – ಹೊಸ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭ
● ಮಾ.1 – ಮಾ.7, 2021 – ಪರೀಕ್ಷೆಗೆ ತಯಾರಿ ನಡೆಸಲು ಬಿಡುವು
● ಮಾ.8 – ಮಾ.26, 2021 – ಸೆಮಿಸ್ಟರ್ ಪರೀಕ್ಷೆ
● ಮಾ.27 – ಎ.4, 2021 – ಸೆಮಿಸ್ಟರ್ ರಜೆಗಳು
● ಎ.5, 2021 – ಹೊಸ ಸೆಮಿಸ್ಟರ್ ತರಗತಿಗಳು ಪ್ರಾರಂಭ
● ಅ.1 – ಅ.8, 2021 – ಪರೀಕ್ಷೆಗೆ ತಯಾರಿ ನಡೆಸಲು ಬಿಡುವು
● ಅ.9 – ಅ.21, 2021 – ಸೆಮಿಸ್ಟರ್ ಪರೀಕ್ಷೆ
● ಅ.22 – ಅ.29, 2021 – ಸೆಮಿಸ್ಟರ್ ರಜೆಗಳು
● ಅ.30 – ಹೊಸ ಶೈಕ್ಷಣಿಕ ವರ್ಷ ಆರಂಭ

ಹಾಗೆಯೇ, ಕೋವಿಡ್-19 ಭೀತಿಯ ನಡುವೆ ಕಾಲೇಜು ತೊರೆದ ಅಥವಾ ಪ್ರವೇಶವನ್ನು ರದ್ದುಗೊಳಿಸಿದ ವಿದ್ಯಾರ್ಥಿಗಳ ಶುಲ್ಕವನ್ನು ಹಿಂದಿರುಗಿಸುವಂತೆ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ.

ಈ ಮೊದಲು, ಯುಜಿಸಿಯು ಸೆಪ್ಟೆಂಬರ್ 1 ರಿಂದ ಪದವಿ ತರಗತಿಗಳನ್ನು ಪ್ರಾರಂಭಿಸಲು ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ನಿರ್ದೇಶನ ನೀಡಿತ್ತು. ಆದರೆ, ಇದೀಗ ದಿನಾಂಕವನ್ನು ನವೆಂಬರ್ 1 ಕ್ಕೆ ಮುಂದೂಡಲಾಗಿದೆ.

“ಕೋವಿಡ್-19 ಸಾಂಕ್ರಾಮಿಕದ ಭೀತಿಯಿಂದಾಗಿ, ಕೇಂದ್ರ ಆಯೋಗವು ಸಮಿತಿಯ ವರದಿಯನ್ನು ಅಂಗೀಕರಿಸಿದೆ ಮತ್ತು 2020-21ರ ಸಾಲಿನ ವಿಶ್ವವಿದ್ಯಾಲಯಗಳ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಯಾಲೆಂಡರ್‌ನ ಯುಜಿಸಿಯ ಮಾರ್ಗಸೂಚಿಗಳನ್ನು ಅನುಮೋದಿಸಿದೆ”ಎಂದು ಶಿಕ್ಷಣ ಸಚಿವ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here