ಹಳೆಯಂಗಡಿ : ಯುವತಿ ಮಂಡಲದ 2020-21ನೇ ಸಾಲಿನ ಪದಾಧಿಕಾರಿಗಳ ನೇಮಕ

0
259
Tap to know MORE!

ಹಳೆಯಂಗಡಿ: ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲದ “ವಾರ್ಷಿಕ ಮಹಾಸಭೆಯು” ಅಕ್ಟೋಬರ್ 11ರ ಭಾನುವಾರ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ಕುಮಾರಿ ದಿವ್ಯಶ್ರೀ ಕೋಟ್ಯಾನ್ ಮತ್ತು ಶ್ರೀಮತಿ ರೇಷ್ಮಾ ಅಶ್ರಫ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

2019-20 ರ ವಾರ್ಷಿಕ ಜಂಟಿ ವರದಿಯನ್ನು ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಯೋಗೀಶ್ ವಾಚಿಸಿದರು. ಜಂಟಿ ಸಂಸ್ಥೆಗಳ ವಾರ್ಷಿಕ ಆಯವ್ಯಯವನ್ನು ಶ್ರೀಮತಿ ರಾಜೇಶ್ವರಿ ರಾಮನಗರ ಹಾಗೂ ಕುಮಾರಿ ರಶ್ಮಿ ರಾಮನಗರ ಮಂಡಿಸಿದರು.

ಈ ಸಂದರ್ಭ, 2020-21 ನೇ ಸಾಲಿಗೆ ಯುವತಿ ಮತ್ತು ಮಹಿಳಾ ಮಂಡಲದ ನೂತನ ಸಮಿತಿಯನ್ನು ರಚಿಸಲಾಯಿತು.

2020-21 ರ ನೂತನ ಪದಾಧಿಕಾರಿಗಳು

ಅಧ್ಯಕ್ಷರು – ಕು. ದಿವ್ಯಶ್ರೀ ರಮೇಶ್ ಕೋಟ್ಯಾನ್
ಉಪಾಧ್ಯಕ್ಷ – ಕು. ರಶ್ವಿತ
ಕಾರ್ಯದರ್ಶಿ – ಕು. ರಕ್ಷಿತಾ
ಜತೆ ಕಾರ್ಯದರ್ಶಿ – ಕು. ರಶ್ಮಿ ರಾಮನಗರ
ಕೋಶಾಧಿಕಾರಿ – ಕು. ನಿಧಿ
ಸಾಂಸ್ಕೃತಿಕ ಕಾರ್ಯದರ್ಶಿ – ಕು. ಹರ್ಷಿತಾ
ಕ್ರೀಡಾ ಕಾರ್ಯದರ್ಶಿ – ಶ್ರೀಮತಿ ದಿವ್ಯ ಸೂರಜ್

ಕಾರ್ಯಕಾರಿ ಸಮಿತಿ ಸದಸ್ಯರು
ಕು.ಹೇಮಾವತಿ
ಕು.ಸೋನಿಯಾ
ಶ್ರೀಮತಿ.ಜಯಶ್ರೀ
ಶ್ರೀಮತಿ.ಚೈತ್ರಾ
ಕು.ವಿದ್ಯಾಶ್ರೀ
ಕು.ಸುರಕ್ಷಾ
ಕು.ಪ್ರಣವಿ
ಕು.ಶೈಲಜಾ
ಕು.ದಾಕ್ಷಾಯಿಣಿ
ಕು.ಸುಷ್ಮಾ
ಕು.ಶ್ವೇತ
ಕು.ರಮ್ಯ
ಕು.ನಿರ್ಮಿತ
ಕು.ರೋಶ್ನಿ

ಸದಸ್ಯರ ಭಾಷಣದಲ್ಲಿ ಯುವತಿ ಮಂಡಲದಿಂದ ಕುಮಾರಿ ಪ್ರಣವಿ ಮತ್ತು ಮಹಿಳಾ ಮಂಡಲದಿಂದ ಶ್ರೀಮತಿ ಮಮತಾ ಎಂ ಪ್ರಭು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೊರೋನಾ ಜಾಗೃತಿ ಬಗ್ಗೆ ಪ್ರತಿಜ್ಞೆ

ಇದೇ ಸಂದರ್ಭದಲ್ಲಿ ಕೊರೋನಾ ಮಾರಕ ರೋಗದ ಬಗ್ಗೆ ಪ್ರತಿಜ್ಞೆಯನ್ನು ಮಾಡಲಾಯಿತು. ಯುವತಿ ಮಂಡಲದ ಕಾರ್ಯದರ್ಶಿಯಾದ ಕುಮಾರಿ ರಕ್ಷಿತಾ ಇವರು ನೆರವೇರಿಸಿದರು.

ಕೊರೋನಾ ಜಾಗೃತಿ ಬಗ್ಗೆ ಪ್ರತಿಜ್ಞೆ ಸ್ವೀಕಾರ

ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಸ್ವಾಗತಿಸಿದರು. ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ಕೋಟ್ಯಾನ್ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here