ಯುವತಿ ಮತ್ತು ಮಹಿಳೆಯರಿಗಾಗಿ ಹೆಲ್ತ್ ಟಿಪ್ಸ್ ಕಾರ್ಯಕ್ರಮ

0
28

ಹಳೆಯಂಗಡಿ: ಯುವತಿ ಮತ್ತು ಮಹಿಳಾ ಮಂಡಲದ ಸಭಾಂಗಣದಲ್ಲಿ “ಹೆಲ್ತ್ ಟಿಪ್ಸ್” ಕಾರ್ಯಕ್ರಮವು ಶನಿವಾರ ಜರುಗಿತು. ಮಂಡಲದ ಸದಸ್ಯೆ ಹಾಗೂ ಡಯಟಿಶನ್ ಮಮತಾ ಎಂ ಪ್ರಭು ಇವರು ಮಂಡಲದ ಸದಸ್ಯರಿಗೆ, ಆರೋಗ್ಯದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಹಾಗೂ ನಮ್ಮ ದೈನಂದಿನ ಬದುಕಿನಲ್ಲಿ ಆಹಾರ ಅಭ್ಯಾಸಗಳು ಹೇಗಿರಬೇಕು? ನೀರಿನ ಉಪಯೋಗ ನಾವು ಯಾವ ರೀತಿ ಮಾಡಬೇಕು ಎಂದು ಮಾಹಿತಿ ನೀಡಿದರು. ಬಳಿಕ ವಿಟಮಿನ್, ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಯುಕ್ತ ಆಹಾರ ಬಳಕೆಯನ್ನು ಹೆಚ್ಚಾಗಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ರೇಷ್ಮಾ , ಕೋಶಾಧಿಕಾರಿ ಶ್ರೀಮತಿ ರಾಜೇಶ್ವರಿ ರಾಮನಗರ, ಯುವತಿ ಮಂಡಲದ ಅಧ್ಯಕ್ಷೆ ಕು. ದಿವ್ಯಶ್ರೀ ಕೋಟ್ಯಾನ್, ಕಾರ್ಯದರ್ಶಿ ಕು.ರಕ್ಷಿತಾ ಉಪಸ್ಥಿತರಿದ್ದರು.

ಯುವತಿ ಮಂಡಲದ ಕೋಶಾಧಿಕಾರಿ ಕು. ನಿಧಿ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಯೋಗೀಶ್ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here