ಕ್ರಿಕೆಟ್‌ನಿಂದ ನಿವೃತ್ತಿ ಹಿಂಪಡೆಯಲಿದ್ದಾರಾ ಯುವರಾಜ್ ಸಿಂಗ್?

0
236
Tap to know MORE!

ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಸುಮಾರು ಒಂದು ವರ್ಷದ ಬಳಿಕ, ಯುವರಾಜ್ ಸಿಂಗ್ ಶೀಘ್ರದಲ್ಲೇ ನಿವೃತ್ತಿಯನ್ನು ಹಿಂಪಡೆದು ಪುನರಾಗಮನ ಮಾಡುವ ಸಾಧ್ಯತೆ ಇದೆ.

ಕ್ರಿಕ್‌ಬಝ್‌ನ ಇತ್ತಿಚಿನ ವರದಿಯ ಪ್ರಕಾರ ಯುವರಾಜ್ ಅವರು ಪಂಜಾಬ್‌ಗಾಗಿ ದೇಶೀಯ ಕ್ರಿಕೆಟ್ ಆಡಲು ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ಕೋವಿಡ್ -19 ರ ಕಾರಣದಿಂದಾಗಿ ಪ್ರಸ್ತುತ ಭಾರತದಲ್ಲಿ ಕ್ರಿಕೆಟ್ ಸ್ಥಗಿತಗೊಂಡಿದೆ.

ಆದರೆ ಯುವರಾಜ್ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಆದೇಶದ ಮೇರೆಗೆ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಎರಡು ಸುದೀರ್ಘ ಶಿಬಿರಗಳನ್ನು ನಡೆಸಿದ್ದಾರೆ. ಅಲ್ಲಿ ಅವರು ಯುವ ಆಟಗಾರರಾಗಿರುವ ಶುಬ್‌ಮಾನ್ ಗಿಲ್, ಅಭಿಷೇಕ್ ಶರ್ಮಾ, ಪ್ರಭಮಸಿರನ್ ಸಿಂಗ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ ಅವರೊಂದಿಗೆ ಆಟವಾಡಿ, ಅವರಿಗೆ ತರಬೇತಿ ನೀಡಿದ್ದಾರೆ.

ಇದನ್ನೂ ನೋಡಿ : ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ ಉತ್ತೇಜಿಸಲು ಸುರೇಶ್ ರೈನಾ ಪ್ರಸ್ತಾಪ

ಅಭ್ಯಾಸದ ಅವಧಿಯಲ್ಲಿ, ಭಾರತದ ಮಾಜಿ ಆಲ್‌ರೌಂಡರ್ ಕ್ರಿಕೆಟ್‌ನ ಬಗೆಗಿನ ಅವರ ಉತ್ಸಾಹವನ್ನು ಪುನಃ ಕಂಡುಕೊಳ್ಳಲು ಸಹಾಯ ಮಾಡಿದೆ ಎನ್ನಲಾಗಿದೆ ಮತ್ತು ಯುವರಾಜ್ ಈಗ ಟಿ 20 ಪಂದ್ಯಾವಳಿಯಲ್ಲಿ ಪಂಜಾಬ್ ಪರ ಆಡಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here