ಯೋಗ ದಿನಾಚರಣೆ 2020 – “ಆರೋಗ್ಯಕ್ಕಾಗಿ ಯೋಗ – ಮನೆಯಲ್ಲಿ ಯೋಗ”

0
222
Tap to know MORE!

ಕೋವಿಡ್ -19 , ಕಾಡ್ಗಿಚ್ಚು, ಬೆಂಕಿ ಅವಘಡಗಳು, ವಿಮಾನ ಅಪಘಾತಗಳು, ಮಿಡತೆ ಹಿಂಡುಗಳು ಮತ್ತು ಚಂಡಮಾರುತಗಳೊಂದಿಗೆ 2020 ರ ಈ ವರ್ಷ ಜನರಿಗೆ ಬೇಡ ಎಂದೇ ಎನಿಸುತ್ತಿದೆ. ವರ್ಷದ ಮೊದಲ ಆರು ತಿಂಗಳುಗಳು ಬಹಳ ಕಠಿಣವಾಗಿತ್ತು. ಕೊರೋನಾ ಸಾಂಕ್ರಾಮಿಕವು, ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯಕರ ಬದುಕಿನ ಮಹತ್ವವನ್ನು ನಮಗೆ ತೋರಿಸಿದೆ. ಯೋಗದಿಂದ ನಾವು ಇವೆರಡನ್ನೂ ಪಡೆಯಬಹುದಾಗಿದೆ.

ಪ್ರತಿ ವರ್ಷ, ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಗುರುತಿಸಲಾಗುತ್ತದೆ. ಆದರೆ ಹೆಚ್ಚಿನ ದೇಶಗಳಲ್ಲಿ ಜಾರಿಯಲ್ಲಿರುವ ಸಾಮಾಜಿಕ ಅಂತರದ ಕ್ರಮಗಳಿಂದಾಗಿ, ಈ ವರ್ಷ ವಿಶ್ವಸಂಸ್ಥೆಯು ಯೋಗ ದಿನಕ್ಕೆ ನಿಗದಿಪಡಿಸಿದ ವಿಷಯವೆಂದರೆ “ಆರೋಗ್ಯಕ್ಕಾಗಿ ಯೋಗ – ಮನೆಯಲ್ಲಿ ಯೋಗ”. ವಿಶ್ವ ಆರೋಗ್ಯ ಸಂಸ್ಥೆಯು ಯೋಗವನ್ನು ಆರೋಗ್ಯವನ್ನು ಸುಧಾರಿಸುವ ಸಾಧನವಾಗಿ ಉಲ್ಲೇಖಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 69 ನೇ ಅಧಿವೇಶನದ ಉದ್ಘಾಟನೆಯ ಸಂದರ್ಭ, ತಮ್ಮ ಭಾಷಣದಲ್ಲಿ ಯೋಗದ ಪ್ರಸ್ತಾಪವನ್ನು ಮೊದಲ ಬಾರಿಗೆ ಮಾಡಿದ್ದರು., ಅದರಲ್ಲಿ ಅವರು ಹೀಗೆ ಹೇಳಿದ್ದರು: “ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯವಾದ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆಯ ಏಕತೆಯನ್ನು ಸಾರುತ್ತದೆ. ಇದು ನಮ್ಮ ಆರೋಗ್ಯ ಮತ್ತು ನಮ್ಮ ಯೋಗಕ್ಷೇಮಕ್ಕೆ ಅಮೂಲ್ಯವಾದ ವಿಧಾನವಾಗಿದೆ.  ಯೋಗವು ಕೇವಲ ವ್ಯಾಯಾಮದ ಬಗ್ಗೆ ಅಲ್ಲ;  ಇದು ನಿಮ್ಮೊಂದಿಗೆ, ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಭಾವವನ್ನು ಕಂಡುಹಿಡಿಯುವ ಒಂದು ಮಾರ್ಗವಾಗಿದೆ. ”

ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ನವದೆಹಲಿಯ ರಾಜ್‌ಪಾತ್‌ನಲ್ಲಿ ಆಚರಿಸಲಾಗಿತ್ತು. ಅಲ್ಲಿ ಪ್ರಧಾನಿ ಮೋದಿ ಮತ್ತು ಇತರ ಗಣ್ಯರು ಯೋಗ ಸುಮಾರು 21 ಆಸನಗಳನ್ನು ಪ್ರದರ್ಶಿಸಿದರು ಮತ್ತು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸೃಷ್ಟಿಸಿದರು. ಮೊದಲ ದಾಖಲೆಯು 35,985 ಜನರೊಂದಿಗೆ ವಿಶ್ವದ ಅತಿದೊಡ್ಡ ಯೋಗ ವರ್ಗವಾಗಿ ಹೊರಹೊಮ್ಮಿತ್ತು ಮತ್ತು ಎರಡನೆಯದು ಗರಿಷ್ಠ ರಾಷ್ಟ್ರದವರು (84) ಒಂದು ಆಚರಣೆಯಲ್ಲಿ ಭಾಗವಹಿಸಿರುವುದಕ್ಕಾಗಿ. ಕಳೆದ ವರ್ಷ ಡೆಹ್ರಾಡೂನ್‌ನಲ್ಲಿ ಮೋದಿ 50,000 ಕ್ಕೂ ಹೆಚ್ಚು ಉತ್ಸಾಹಿಗಳೊಂದಿಗೆ ಯೋಗವನ್ನು ಪ್ರದರ್ಶಿಸಿದ್ದರು.

LEAVE A REPLY

Please enter your comment!
Please enter your name here