ರಕ್ತ ವೃದ್ಧಿಗೆ ಮನೆಮದ್ದು

0
232
Tap to know MORE!

ಆಮ್ಲಜನಕ ಮತ್ತು ಆಹಾರದ ಸತ್ವಗಳನ್ನು ದೇಹದಲ್ಲಿ ಕೊಂಡೊಯ್ಯಲು ರಕ್ತದ ಕಣಗಳು ಸಹಕರಿಸುತ್ತವೆ. ನಿಯಮಿತವಾದ ರಕ್ತದ ಕಣಗಳ ಕೊರತೆಯುಂಟಾದಾಗ ಎನಿಮಿಯ ಅಥವಾ ರಕ್ತ ಹೀನತೆ ಉಂಟಾಗುತ್ತದೆ. ಸಾಮನ್ಯವಾಗಿ ಹೆಚ್ಚಿನವರನ್ನು ಈ ಸಮಸ್ಯೆ ಕಾಡುತ್ತಿರುತ್ತದೆ. ಮನೆಯಲ್ಲಿಯೇ ರಕ್ತ ವೃದ್ಧಿಗೆ ನಾವೇನು ಮಾಡಬಹುದು ಎಂದರೆ..

4 ಚಮಚ ಕೊತ್ತಂಬರಿ ಸೊಪ್ಪಿನ ರಸ, 1 ಚಮಚ ಜೇನುತುಪ್ಪ ಮಿಶ್ರ ಮಾಡಿ ಪ್ರತಿದಿನ ಮಲಗುವಾಗ ಕುಡಿಯಬೇಕು ಇದರಿಂದ 1 ತಿಂಗಳಲ್ಲಿ 2 ಗ್ರಾಮ್ ರಕ್ತ ಹೆಚ್ಚಾಗುತ್ತದೆ. ಅಥವಾ 2 ಹಿಡಿ ಗರಿಕೆ ಹುಲ್ಲಿನ ರಸಕ್ಕೆ ಸ್ವಲ್ಪ ನೀರು ಸೇರಿಸಿ ರುಬ್ಬಿ ರಸ ತೆಗೆಯುವುದು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಅಥವಾ ಒಳ್ಳೆಯ ಬೆಲ್ಲ ಸೇರಿಸಿ ಸೇವಿಸಬಹುದು. ಇದು ರಕ್ತ ಉತ್ಪಾದನೆಗೆ ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಅಲ್ಲದೆ ಮೂತ್ರಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here