BIG NEWS| ಡಿಸೆಂಬರ್ 31ರಂದು ರಜನಿಕಾಂತ್ ರಾಜಕೀಯ ಪಕ್ಷದ ಘೋಷಣೆ

0
136
Tap to know MORE!

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಬಹುನಿರೀಕ್ಷಿತ ರಾಜಕೀಯ ಪಕ್ಷವನ್ನು ಡಿಸೆಂಬರ್ 31 ರಂದು ಘೋಷಿಸಿ, ಜನವರಿಯಿಂದ ಚಟುವಟಿಕೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. 69 ವರ್ಷದ ರಜನಿಕಾಂತ್ ಅವರು ತಮ್ಮ ವೇದಿಕೆಯಾಗಿರುವ ರಜಿನಿ ಮಕ್ಕಲ್ ಮಂದಿರದ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾದ ಒಂದು ದಿನದ ಬಳಿಕ ಈ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಆನ್ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದ ಆಂಧ್ರ ಸರ್ಕಾರ!

ಅದಲ್ಲದೆ ಮಂಗಳವಾರವಷ್ಟೇ ಅವರು ಚುನಾವಣಾ ರಾಜಕೀಯದ ಯೋಜನೆಗಳ ಕುರಿತು “ಶೀಘ್ರದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ” ಎಂದು ಹೇಳಿದ್ದರು. “ಜಿಲ್ಲಾ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಅವರು ಒಪ್ಪುತ್ತಾರೆ ಎಂದು ಅವರು ಹೇಳಿದ್ದಾರೆ. ನನ್ನ ನಿರ್ಧಾರವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ” ಎಂದು 69 ವರ್ಷದ ತನ್ನ ಪೋಯಸ್ ಗಾರ್ಡನ್ ಮನೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here