ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡ ರಫೇಲ್

0
237
Tap to know MORE!

ಫ್ರಾನ್ಸ್‌ನಿಂದ ಈಗಾಗಲೇ ಭಾರತಕ್ಕೆ ತರಲಾಗಿರುವ ಐದು ರಫೇಲ್‌ ಯುದ್ಧ ಮಾನಗಳು ಗುರುವಾರ(ಸೆಪ್ಟೆಂಬರ್ 10, 2020) ಅಧಿಕೃತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿದೆ.

ಹರ್ಯಾಣದ ಅಂಬಾಲಾದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಆರ್‌.ಕೆ.ಎಸ್‌.ಬಧೌರಿಯಾ ಸೇರಿ ಪ್ರಮುಖರು ಭಾಗವಹಿಸಿದ್ದರು.

ಬಳಿಕ ಎರಡೂ ದೇಶಗಳ ರಕ್ಷಣಾ ಸಚಿವರು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕಡಲು ಸಂಬಂಧಿ ಭದ್ರತೆ, ಉಗ್ರ ನಿಗ್ರಹ ಕ್ಷೇತ್ರದಲ್ಲಿ ಸಹಕಾರಗಳ ಬಗ್ಗೆಯೂ ಮಾತುಕತೆ ನಡೆದಿರುವುದಾಗಿ ವರದಿ ತಿಳಿಸಿದೆ.

ಸೇನೆಗೆ ರಫೇಲ್ ಸೇರ್ಪಡೆ ವೇಳೆ ಸರ್ವ ಧರ್ಮ ಪೂಜೆ, ಸಾರಂಗ್, ತೇಜಸ್ ಪಡೆಗಳಿಂದ ವೈಮಾನಿಕ ಪ್ರದರ್ಶನ ನಡೆಯಿತು. ಭಾರತ ಫ್ರಾನ್ಸ್ ಜತೆ 36 ಯುದ್ಧ ವಿಮಾನಗಳ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲಟ್ ಗಳ ತರಬೇತಿಗಾಗಿ ಫ್ರಾನ್ಸ್ ನಲ್ಲೇ ಇದ್ದು, ಉಳಿದ 5 ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿದ್ದವು.

LEAVE A REPLY

Please enter your comment!
Please enter your name here