ಯೂರಿಯಾ ಗೊಬ್ಬರ ಸಿಗದೇ ಕಂಗೆಟ್ಟ ರೈತರಿಗೆ ಸಿಹಿ ಸುದ್ದಿ

0
215
Tap to know MORE!

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡ ಹೆಚ್ಚಿನ ಜನರು ಗ್ರಾಮಗಳಿಗೆ ಮರಳಿದ್ದು, ಬಹುತೇಕರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಈ ಕಾರಣದಿಂದ ಬಿತ್ತನೆ ಪ್ರಮಾಣ ಹೆಚ್ಚಳವಾಗಿದ್ದು ಗೊಬ್ಬರಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.

ಕರ್ನಾಟಕದ ವಿವಿಧ ಜೆಲ್ಲೆಗಳಲ್ಲಿ ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರಸಗೊಬ್ಬರ ಅಭಾವದಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಚೀನಾ ದೇಶದಿಂದ ಬರಬೇಕಿದ್ದ ಯೂರಿಯಾ ತುಂಬಿದ ಹಡಗು ವಿಪರೀತ ಮಳೆಯಿಂದಾಗಿ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಮಂಗಳೂರು ಬಂದರನ್ನು ಸೇರಿದೆ. ಇಂದಿನಿಂದ ರಸಗೊಬ್ಬರ ವಿವಿಧ ಜೆಲ್ಲೆಗಳ ಲಾರಿಗಳಿಗೆ ಲೋಡ್ ಆಗಲಿದ್ದು, ಗಣೇಶ ಹಬ್ಬದ ನಂತರ ಯೂರಿಯಾ ಗೊಬ್ಬರ ಎಲ್ಲಾ ಜಿಲ್ಲೆಗಳಿಗೆ ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ

LEAVE A REPLY

Please enter your comment!
Please enter your name here