ರಸ್ತೆಯಲ್ಲೇ ಸೋಂಕಿತ..!

0
70

ಬೆಂಗಳೂರು: ವೈದ್ಯಕೀಯ ಇಲಾಖೆಯು ಮಾಧ್ಯಮಗಳ ಎದುರು, ಸೋಂಕಿತರ ಕರೆಗೆ ತಕ್ಷಣ ಸ್ಪಂದಿಸುತ್ತೇವೆ ಎಂದು ಹೇಳಿದ ದಿನವೇ ಬೆಂಗಳೂರಿನ ಜ್ಞಾನ ಭಾರತಿ ರಸ್ತೆಯಲ್ಲಿ ಸೋಂಕಿತ ವ್ಯಕ್ತಿ ಸತತ 6 ಗಂಟೆಯಿಂದ ಆಂಬ್ಯುಲೆನ್ಸ್ ಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಂಕಿತ ವ್ಯಕ್ತಿಯು ಜೂ. 21 ರಂದು ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಗಂಟಲು ಮಾದರಿ ನೀಡಿ ಪರೀಕ್ಷೆಗೆ ಒಳಪಟ್ಟಿದ್ದರು. ಇಂದು ಬೆಳಿಗ್ಗೆ ಆತನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿರುವ ಕಾರಣ ಆಸ್ಪತ್ರೆಗೆ ದಾಖಲಾಗಲು ಆಂಬ್ಯುಲೆನ್ಸ್ ಕಳಿಸುತ್ತೇವೆ ಎಂದು ಹೇಳಿದ ಇಲಾಖೆ ಬೆಳಿಗ್ಗೆ 8:45 ರಿಂದ ಸಂಜೆಯಾದರು ಇನ್ನೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಈ ಕುರಿತು ವ್ಯಕ್ತಿ ಆಸ್ಪತ್ರೆಗೆ ಕರೆ ಮಾಡಿದಾಗ, ತಮ್ಮಲ್ಲಿ ಹಾಸಿಗೆಗಳು ಖಾಲಿ ಇಲ್ಲ ಮತ್ತು ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ಉತ್ತರಿಸಿದ್ದಾರೆ ಎಂದು ಸೋಂಕಿತ ವ್ಯಕ್ತಿ ಹೇಳಿದ್ದಾರೆ. ಹೀಗಾಗಿ ಇದೀಗ ಸೋಂಕಿತ ವ್ಯಕ್ತಿ ಪರದಾಡುವಂತಾಗಿದೆ ಮತ್ತು ವ್ಯಕ್ತಿ ಕಾಯುತ್ತಿರುವ ಅದೇ ರಸ್ತೆಯಲ್ಲಿ ಓಡಾಡುವವರಿಗೆ ಹರಡುವ ಆತಂಕವೂ ಸೋಂಕಿತ ವ್ಯಕ್ತಿಗೆ ಹೆಚ್ಚಾಗಿದೆ.

ಈ ಘಟನೆಯಿಂದ ಈಗ ಬೆಂಗಳೂರಿನಲ್ಲಿ ನಿಜವಾಗಿಯೂ ಕೊರೊನಾ ರೋಗಿಗಳಿಗೆ ಸಾಕಷ್ಟು ಹಾಸಿಗೆಗಳು ಇಲ್ಲವೇ ಹಾಗೂ ರೋಗಿಗಳನ್ನು ಇಷ್ಟೊಂದು ಹೀನಾಯವಾಗಿ ನೋಡಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸುಮಾರು 7 ಗಂಟೆಗಳ ಬಳಿಕ ಬಂತು ಆಂಬುಲೆನ್ಸ್

ಆಂಬುಲೆನ್ಸ್ ಗಾಗಿ ಕಾಯುತ್ತಿದ್ದ ಸೋಂಕಿತನ ಕರೆಗೆ ಕಡೆಗೂ ವೈದ್ಯಕೀಯ ಇಲಾಖೆ ಸ್ಪಂದಿಸಿದೆ. ಪೋಲೀಸ್ ಇಲಾಖೆಯೇ ನೇರವಾಗಿ ಆಸ್ಪತ್ರೆಗೆ ಹೋಗಿ ಬೇಡಿದ್ದರಿಂದ ಆ ಸೋಂಕಿತನನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಿದೆ.

LEAVE A REPLY

Please enter your comment!
Please enter your name here