“ನಟಿ ರಾಗಿಣಿ ದ್ವಿವೇದಿ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ” : ಕ್ಯಾಪ್ಟನ್ ಕಾರ್ಣಿಕ್

0
258
Tap to know MORE!

ಡ್ರಗ್ಸ್ ಹಗರಣದಲ್ಲಿ ಬಂಧಿಸಲ್ಪಟ್ಟ ‘ಸ್ಯಾಂಡಲ್‌ವುಡ್’ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಸ್ಪಷ್ಟಪಡಿಸಿದೆ.

“ನಾವು ರಾಗಿಣಿ ದ್ವಿವೇದಿ ಅವರನ್ನು ಬೆಂಬಲಿಸುತ್ತಿಲ್ಲ. ಹಾಗೆಯೇ, ಅವರಿಗೂ ಬಿಜೆಪಿಗೂ ನಂಟಿದೆ ಎಂಬ ಊಹಾಪೋಹವನ್ನು ಅಲ್ಲಗೆಳೆಯುತ್ತೇವೆ” ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಬಿಜೆಪಿಗೆ “ಸ್ವಯಂಪ್ರೇರಣೆಯಿಂದ” ಪ್ರಚಾರ ಮಾಡಿದ ನೂರಾರು ಪ್ರಸಿದ್ಧ ವ್ಯಕ್ತಿಗಳಲ್ಲಿ ಅವರೂ ಒಬ್ಬರು ಎಂದು ಕಾರ್ಣಿಕ್ ಹೇಳಿದರು.

“2019ರ ಉಪಚುನಾವಣೆಯ ಸಂದರ್ಭದಲ್ಲಿ ವಿವಿಧ ವರ್ಗದ ನೂರಾರು ಗಣ್ಯರು, ಸ್ವಯಂಪ್ರೇರಣೆಯಿಂದ ಬಿಜೆಪಿಗಾಗಿ ಪ್ರಚಾರ ನಡೆಸಿದರು. ನಟಿ ರಾಗಿಣಿ ಅವರಲ್ಲಿ ಒಬ್ಬರಾಗಿರಬಹುದು. ಪಕ್ಷವು ಅವರಿಗೆ ಯಾವುದೇ ಚುನಾವಣಾ ಕರ್ತವ್ಯವನ್ನು ವಹಿಸಿಲ್ಲ” ಎಂದು ಅವರು ಹೇಳಿದರು.

“ರಾಗಿಣಿ ದ್ವಿವೇದಿ ಅವರು ಬಿಜೆಪಿಯ ಸದಸ್ಯರಲ್ಲ. ಹಾಗೆಯೇ, ಬಿಜೆಪಿಯು ಅವರಿಗೆ ಯಾವುದೇ ಚುನಾವಣಾ ಜವಾಬ್ದಾರಿಯನ್ನೂ ವಹಿಸಿಕೊಟ್ಟಿಲ್ಲ. ಅವರು ತಮ್ಮದೇ ಆದ ಅಭಿಮಾನದಿಂದ ಭಾಗಿಯಾಗಿರಬಹುದು” ಎಂದು ಅವರು ಹೇಳಿದರು.

ಅವರ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಅವರು ಮಾಡಿದ ಯಾವುದೇ ಕೆಲಸಗಳಿಗೆ ಬಿಜೆಪಿಯು ಜವಾಬ್ದಾರರಾಗಿರುವುದಿಲ್ಲ ಅಥವಾ ಉತ್ತರಿಸಲಾಗುವುದಿಲ್ಲ ಎಂದು ಅವರು ಹೇಳಿದರು. “ಪಕ್ಷಕ್ಕೂ, ಅವರ ಮೇಲೆ ಬಂದಿರುವ ಅಪಾದನೆಗೂ ಯಾವುದೇ ಸಂಬಂಧವಿಲ್ಲ. ಅದರಿಂದ ನಾವು ಅಂತರವನ್ನು ಕಾಯ್ದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.

ಬಿಜೆಪಿ ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಕಾರ್ಣಿಕ್ ಒತ್ತಿ ಹೇಳಿದರು. ರಾಜ್ಯ ಬಿಜೆಪಿ ಮಾಧ್ಯಮ ಜಂಟಿ ಕನ್ವೀನರ್ ಬಿ.ಎನ್. ರಾಘವೇಂದ್ರ ಮತ್ತು ಕನ್ವೀನರ್ ಎ.ಎಚ್. ​​ಆನಂದ್ ಕಾರ್ಣಿಕ್ ಅವರ ಹೇಳಿಕೆಯನ್ನು ಬೆಂಬಲಿಸಿದರು.

LEAVE A REPLY

Please enter your comment!
Please enter your name here