ರಾಜ್ಯದಲ್ಲಿ ಇಂದು 115 ಸೋಂಕಿತರನ್ನು ಬಲಿ ಪಡೆದ ಕೊರೋನಾ!

0
150
Tap to know MORE!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು ದಾಖಲೆಯ 115 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇವುಗಳ ಪೈಕಿ 75 ಸಾವುಗಳು ಬೆಂಗಳೂರಿನಲ್ಲಿಯೇ ಸಂಭವಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ

ರಾಜ್ಯದಲ್ಲಿ ಕೊರೋನಾ ರಣ ಅಟ್ಟಹಾಸ ಮಿತಿ ಮೀರಿದೆ. ಇಂದು ಬೆಂಗಳೂರಿನಲ್ಲಿ ದಾಖಲೆಯ 2,208 ಹೊಸ ಸೋಂಕಿತರ ವರದಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಇಂದು 3 ಸಾವಿರಕ್ಕೂ ಅಧಿಕ ಸೋಂಕಿತರು ದಾಖಲಾಗಿದ್ದಾರೆ. ಇಂದಿನ 3,693 ಸೇರಿ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,115 ಗೆ ಏರಿಕೆಯಾಗಿದೆ. ಇವುಗಳ ಪೈಕಿ, 33,205 ಪ್ರಕರಣಗಳು ಸಕ್ರಿಯವಾಗಿದೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದೆ. ಆದರೆ ಈಗ ಸತತ ಎರಡನೇ ದಿನ ಎರಡು ಸಾವಿರಕ್ಕೂ ಅಧಿಕ ಸೋಂಕಿತರು ದಾಖಲಾಗಿದ್ದಾರೆ. ಇಂದಿನ 2,208 ಸೋಂಕಿತರ ವರದಿಯಾಗಿದ್ದು, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20,623 ಗೆ ಏರಿದೆ. ದಕ್ಷಿಣ ಕನ್ನಡ (1,704) ಮತ್ತು ಧಾರವಾಡ (1,086) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 3 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಧಾರವಾಡ 157, ಬಳ್ಳಾರಿ 133, ವಿಜಯಪುರದಲ್ಲಿ 118 ಸೋಂಕಿತರು ಇಂದು ಬೆಳಕಿಗೆ ಬಂದಿರುತ್ತಾರೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 1,028 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 20,757 ಸೋಂಕಿತರು ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here