ರಾಜ್ಯದಲ್ಲಿ ಇನ್ನು ಹೆಚ್ಚಿನ ಲಾಕ್‌ಡೌನ್ ಇಲ್ಲ : ಯಡಿಯೂರಪ್ಪ

0
165
Tap to know MORE!

ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ರಾಜ್ಯಕ್ಕೆ ಯಾವುದೇ ಲಾಕ್ಡೌನ್ ನ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನರಿಗೆ ತಮ್ಮ ಜೀವನವನ್ನು ಸಾಮಾನ್ಯವಾಗಿ ನಡೆಸಲು ಅನುಕೂಲವಾಗಬೇಕಿದೆ ಎಂದು ಅವರು ಹೇಳಿದರು.

ಜೂನ್ 16 ರ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 17 ಬುಧವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸುವ ಸಂವಾದದ ಸಂದರ್ಭದಲ್ಲಿ ಇದರ ಕುರಿತು ಚರ್ಚಿಸುವುದಾಗಿ ಹೇಳಿದರು.

ಸಿಎಂ ಹೇಳಿಕೆಯು ಬುಧವಾರ ಪ್ರಧಾನಮಂತ್ರಿಯವರ ಜೊತೆಗೆ ನಡೆಯಲಿರುವ ವಿಡಿಯೋ ಸಂವಾದದ ಮುಂಚಿತವಾಗಿ ಬಂದಿದೆ. ಕೋವಿಡ್ -19 ಹರಡುವಿಕೆಯ ತಡೆಗಟ್ಟಲು ಹಾಗೂ ಜೂನ್ 30 ರವರೆಗೆ ಜಾರಿಯಲ್ಲಿರುವ ಲಾಕ್‌ಡೌನ್ ಮಾರ್ಗಸೂಚಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಲು ಕರ್ನಾಟಕ ನಿರ್ಧರಿಸಿದೆ.

LEAVE A REPLY

Please enter your comment!
Please enter your name here