ರಾಜ್ಯದಲ್ಲಿ ಒಂದೇ ದಿನ 20 ಸೋಂಕಿತರು ಬಲಿ !

0
159
Tap to know MORE!

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಇಂದು ಒಂದೇ ದಿನ 947 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 7,074.ಕ್ಕೆ ಏರಿದಂತಾಗಿದೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ, ಇದೀಗ ಒಟ್ಟು 3,916 ಸಕ್ರಿಯ ಪ್ರಕರಣಗಳಿದ್ದು, ಬಳ್ಳಾರಿ (400), ದಕ್ಷಿಣ ಕನ್ನಡ (342) ಮತ್ತು ಕಲಬುರ್ಗಿ (323) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ. ರಾಜ್ಯದ ಇತರ ಯಾವುದೇ ಜಿಲ್ಲೆಗಳಲ್ಲೂ ಈಗ 300ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯಲ್ಲಿ 503 ಸೋಂಕಿತರ ವರದಿಯಾಗಿದ್ದು, ಬಳ್ಳಾರಿಯಲ್ಲಿ 61 ಸೋಂಕಿತರು ಮತ್ತು ಹಾವೇರಿ ಜಿಲ್ಲೆಯಲ್ಲಿ 49 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.

ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 235 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 7,918 ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿರುತ್ತಾರೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಸತತ ನಾಲ್ಕನೇ ದಿನ 10ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇಂದು ಒಂದೇ ದಿನ 20 ಸೋಂಕಿತರು, ಕೊರೋನಾಗೆ ಬಲಿಯಾಗಿದ್ದಾರೆ. ಇದು ರಾಜ್ಯದ ಮಟ್ಟಿಗೆ ದಾಖಲೆಯಾಗಿದ್ದು, ಇದುವರೆಗೆ ಒಂದು ದಿನದಲ್ಲಿ 19 ಮಂದಿ ಸಾವನ್ನಪ್ಪಿದ್ದು ದಾಖಲೆಯಾಗಿತ್ತು. ನಿನ್ನೆ ಬಳ್ಳಾರಿಯಲ್ಲಿ 12 ಮಂದಿಯನ್ನು ಬಲಿ ತೆಗೆದುಕೊಂಡ ಕೊರೋನಾ, ಇಂದು 6 ಮಂದಿಯನ್ನು ಬಲಿತೆಗೆದುಕೊಂಡಿದೆ. ಬಳ್ಳಾರಿ ಜಿಲ್ಲಾಡಳಿತಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದಲ್ಲದೆ ಇಂದು ಬೆಂಗಳೂರು ನಗರದಲ್ಲಿ 4, ಹಾವೇರಿ, ಧಾರವಾಡ, ವಿಜಯಪುರದಲ್ಲಿ ತಲಾ 2, ಕೋಲಾರ, ದಾವಣಗೆರೆ, ಮೈಸೂರು, ಬೆಳಗಾವಿಯಲ್ಲಿ ತಲಾ 1 ಸೋಂಕಿತರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here