ರಾಜ್ಯಾದ್ಯಂತ ಲಾಕ್ಡೌನ್ ನಡುವೆಯೂ ನಡೆದಿದೆ 40,000ಕ್ಕೂ ಅಧಿಕ ಮದುವೆ!

0
179
Tap to know MORE!

ಮಾರ್ಚ್ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಈ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮದುವೆ ಸಮಾರಂಭಗಳು ಕಡಿಮೆಯಾಗಲಿಲ್ಲ ಎಂದು ವರದಿ ಹೇಳಿದೆ.

ಆ ವರದಿಯ ಪ್ರಕಾರ, ಕೊರೋನವೈರಸ್ ಸಾಂಕ್ರಾಮಿಕ ಭೀತಿಯಿಂದ, ಜಾರಿಯಲ್ಲಿದ್ದ ನಿರ್ಬಂಧದ ನಡುವೆಯೂ, ರಾಜ್ಯದಲ್ಲಿ ವಿವಾಹಗಳ ನೋಂದಣಿ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಮದುವೆಯ ರಿಜಿಸ್ಟ್ರಾರ್ ಅವರೊಂದಿಗೆ ಲಭ್ಯವಿರುವ ದಾಖಲೆಗಳ ಪ್ರಕಾರ, ಮಾರ್ಚ್ ತಿಂಗಳಿನಿಂದ ರಾಜ್ಯಾದ್ಯಂತ 40,000 ಕ್ಕೂ ಹೆಚ್ಚು ವಿವಾಹಗಳು ನಡೆದಿವೆ. ಈ ಪೈಕಿ ಬಳ್ಳಾರಿ ಜಿಲ್ಲೆಯೊಂದರಲ್ಲೇ ಸುಮಾರು 12,000 ವಿವಾಹ ಸಮಾರಂಭಗಳಾಗಿ, ರಾಜ್ಯದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ತಮ್ಮ ವಿವಾಹಗಳನ್ನು ನೋಂದಾಯಿಸದೇ ಇರುವ ಕಾರಣ, ಆ ಮದುವೆಗಳ ದಾಖಲೆಗಳು ನಿಖರವಾಗಿ ಲಭ್ಯವಿರುವುದಿಲ್ಲ.

ಬಳ್ಳಾರಿಯಲ್ಲಿನ ಜಿಲ್ಲಾ ವಿವಾಹ ನೋಂದಣಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಯೊಬ್ಬರು, ಕಳೆದ ವರ್ಷಕ್ಕೆ ಹೋಲಿಸಿದರೆ, ಕಡ್ಡಾಯ ನೋಂದಣಿಯಿಂದಾಗಿ ಈ ವರ್ಷ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಮದುವೆಗೂ ಮೊದಲೇ ನವ ದಂಪತಿಗಳು ನೋಂದಣಿ ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 1,141 ವಿವಾಹಗಳು ನೋಂದಣಿಯಾಗಿತ್ತು. ಆದರೆ ಈ ವರ್ಷ, ಲಾಕ್ಡೌನ್ ಸಂದರ್ಭದ ಮೂರು ತಿಂಗಳಲ್ಲೇ 12,300 ವಿವಾಹಗಳನ್ನು ನೋಂದಾಯಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ, ಹಲವು ಜನಪ್ರಿಯ ವ್ಯಕ್ತಿಗಳ ವಿವಾಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ ಎನ್ನಲಾಗಿದೆ. ಅದಲ್ಲದೆ, ಲಾಕ್ ಡೌನ್ ಸಮಯದಲ್ಲಿ ಕೆಲವು ಆನ್‌ಲೈನ್ ವಿವಾಹಗಳು ಸಹ ನಡೆದಿವೆ.

LEAVE A REPLY

Please enter your comment!
Please enter your name here