ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ವಿರುದ್ಧ ಮತ್ತೊಂದು ಎಫ್ ಐಆರ್..!

0
106
Tap to know MORE!

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬಿಸಿನೆಸ್ ಮ್ಯಾನ್ ಒಬ್ಬರಿಂದ 1.51 ಕೋಟಿ ಹಣವನ್ನು ಪಡೆದು ವಂಚನೆ ನಡೆಸಿದ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿತಿನ್ ಬರಾರಿ ಎಂಬ ಬಿಸಿನೆಸ್ ಮ್ಯಾನ್ ಶನಿವಾರ ಬಾಂದ್ರಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. 2014ರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ ಎಸ್ಎಫ್ಎಲ್ ಫಿಟ್ನೆಸ್ ಕಂಪನಿಗೆ ಹಣ ಹೂಡಿಕೆ ಮಾಡುವಂತೆ ಅದರ ಡೈರೆಕ್ಟರ್ ಖಾಶಿಫ್ ಖಾನ್, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮನವೊಲಿಕೆ ಮಾಡಿದ್ದರು.

ಒಪ್ಪಂದದ ಪ್ರಕಾರ ಹಣ ಹೂಡಿಕೆ ಮಾಡಿದ್ದು, ಕಂಪೆನಿ  ಅಡಿಯಲ್ಲಿ ಪುಣೆಯ ಹಡಪ್ಸರ್ ಮತ್ತು ಕೋರೆಗಾಂವ್ ನಲ್ಲಿ ಜಿಮ್ ಮತ್ತು ಸ್ಪಾ ಸೆಂಟರನ್ನು ಆರಂಭಿಸಬೇಕಿತ್ತು. ಆದರೆ ಅದನ್ನು ಮಾಡಿಕೊಡದೆ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here