ಬಹುಭಾಷೆಗಳಲ್ಲಿ ತೆರೆಯ ಮೇಲೆ ಬರಲಿದೆ ಉಳ್ಳಾಲದ “ರಾಣಿ ಅಬ್ಬಕ್ಕ” ಜೀವನಾಧಾರಿತ ಸಿನಿಮಾ!

0
180
Tap to know MORE!

ಕರಾವಳಿಯ ರಾಣಿ ಅಬ್ಬಕ್ಕನ ಹೋರಾಟದ ಪುಟಗಳು ಗೋಲ್ಡನ್‌ ಡೇಸ್‌. ಸಮುದ್ರ ಯುದ್ಧನೀತಿಯಲ್ಲಿ ನೈಪುಣ್ಯತೆ ಹೊಂದಿದ್ದ ಏಕೈಕಾ ರಾಣಿ ಎಂದರೂ ತಪ್ಪಾಗಲಿಕ್ಕಿಲ್ಲ. ಮೊಗವೀರರು ಹಾಗೂ ಬ್ಯಾರಿಗಳನ್ನು ತನ್ನ ಜತೆಗೆ ಸೇರಿಸಿಕೊಂಡು ಬಲಿಷ್ಠವಾದ ಸೈನ್ಯ ಕಟ್ಟಿದವಳು. ಒಂದು ಕಡೆ ಅರಬ್ಬರ ಜತೆ ಸೌಹಾರ್ದಯುತ ವ್ಯಾಪಾರ ಮಾಡುತ್ತಲೇ, ಅಕ್ರಮವಾಗಿ ದಾಳಿ ಮಾಡುತ್ತಿದ್ದ ಪೋರ್ಚುಗೀಸರನ್ನು ಭಾರತಕ್ಕೆ ಕಾಲಿಡದಂತೆ ಗಟ್ಟಿಯಾಗಿ ಎದುರಿಸಿ ನಿಂತ ಮಹಿಳೆ ರಾಣಿ ಅಬ್ಬಕ್ಕ. ರಣರಂಗದಲ್ಲಿ ಈಕೆಯ ಯುದ್ಧ ನೀತಿ ಕಂಡು ಪೋರ್ಚುಗೀಸರೇ ದಂಗಾಗಿದ್ದರು. ‘ಅಬ್ಬಕ್ಕನ ಕುರಿತು ಸಿನಿಮಾ ಮಾಡುವುದಕ್ಕೆ ನನಗೆ ಪ್ರೇರಣೆ ಆಗಿದ್ದೇ ಆಕೆಯ ಜಲಮಾರ್ಗದ ಯುದ್ಧ ಪರಿಣತಿ. ಕಳೆದ ಮೂರು ವರ್ಷಗಳಿಂದ ಈ ಕುರಿತು ಅಧ್ಯಯನ ಮಾಡುತ್ತಿದ್ದೆ. ಈಗ ಸೂಕ್ತ ಸಮಯ ಎಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಮಂಸೋರೆ.

ಕ್ರಿ.ಶ.16ನೇ ಶತಮಾನದಲ್ಲಿ ಕಂಡರಿಯದ ರೀತಿಯಲ್ಲಿ ಗರ್ಜಿಸಿದ ರಾಣಿ ಅಬ್ಬಕ್ಕ ಚೌಟ ಅವರ ಜೀವನ ಪುಟಗಳು ಈಗ ತೆರೆ ಮೇಲೆ ಮೂಡುತ್ತಿವೆ. ನಿರ್ದೇಶಕ ಮಂಸೋರೆ, ‘ಅಬ್ಬಕ್ಕ’ ಹೆಸರಿನಲ್ಲಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಮಣಿಕರ್ಣಿಕಾ, ಪದ್ಮಾವತಿ, ತೆಲುಗಿನಲ್ಲಿ ರುದ್ರಮ್ಮ ದೇವಿ, ಗೌತಮಿಪುತ್ರ ಶಾತಕರ್ಣಿ ಮುಂತಾದ ಐತಿಹಾಸಿಕ ಹೋರಾಟಗಳ ಮತ್ತು ಅದರ ಸಾರಥಿಗಳ ಜೀವನವನ್ನು ತೆರೆ ಮೇಲೆ ನೋಡಿ ಥ್ರಿಲ್ಲಾದ ಪ್ರೇಕ್ಷಕ, ಕನ್ನಡದ ನೆಲದ ರಾಣಿಯ ಕತೆಯನ್ನೂ ಕೂಡ ನೋಡಬಹುದಾಗಿದೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ: ಭಾರತದಿಂದ ಮಲಯಾಳಂ ಚಿತ್ರ “ಜಲ್ಲಿಕಟ್ಟು” ನಾಮನಿರ್ದೇಶನ

ಕರ್ನಾಟಕ, ಕೇರಳ, ರಾಜಸ್ಥಾನ, ಹೈದಾರಬಾದ್‌ ನ ಸ್ಥಳಗಳಲ್ಲಿ 200 ದಿನಗಳ ಕಾಲ ಚಿತ್ರೀಕರಣ. ವಿವಿಧ 20 ರಿಂದ 25 ಸೆಟ್‌ಗಳ ನಿರ್ಮಾಣ ಮಾಡಲಾಗಿದೆ.ಸಮುದ್ರದ ಸೆಟ್‌ಗಳು ಹಾಗೂ ವಾರ್‌ ಫೀಲ್ಡ್‌ ಸೆಟ್‌ಗಳಿಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ವಿಶೇಷ ಅಂದ್ರೆ ಇಡೀ ಸಿನಿಮಾ ವಾರ್‌ ರೀತಿಯಲ್ಲಿ ಮೂಡಿ ಬರಲಿದೆ. ಅಬ್ಬಕ್ಕ ಕಥೆಗೆ ಜೀವ ತುಂಬಲು 15 ಮಂದಿ ಪ್ರಮುಖ ಪಾತ್ರದಾರಿಗಳು, 200 ರಿಂದ 250 ಸಹ ಕಲಾವಿದರು ಅಭಿನಯಿಸಿದ್ದಾರೆ. ಮಲಯಾಳಂ, ಪೋರ್ಚುಗೀಸ್‌ ಕಲಾವಿದರು, ತುಳು ಹಾಗೂ ರಂಗಭೂಮಿ ನಟರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಾರತೀಯ ಸಿನಿಮಾ ಆದರೂ ತಾಂತ್ರಿಕ ತಂಡದಲ್ಲಿ ಹಾಗೂ ಕಲಾವಿರ ವಿಭಾಗದಲ್ಲಿ ಕನ್ನಡಿಗರೇ ಹೆಚ್ಚಿರುವುದು ಖುಷಿಯ ವಿಚಾರ. ರಾಣಿ ಅಬ್ಬಕ್ಕನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬುದು ಕುತೂಹಲ ಇದೆ. ಈ ಕುತೂಹಲಕ್ಕೆ ತೆರೆ ಎಳೆಯಲು ಸಂಕ್ರಾಂತಿಗೆ ಈ ಚಿತ್ರದ ನಿರ್ಮಾಣ ಸಂಸ್ಥೆ, ಅಬ್ಬಕ್ಕನ ಪಾತ್ರದಾರಿಯ ಪರಿಚಯ ಮಾಡಲಿದೆ.

LEAVE A REPLY

Please enter your comment!
Please enter your name here