ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (74) ಇಂದು ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಅಗತ್ಯ ಬಿದ್ದರೆ ಇನ್ನೂ ಒಂದುವಾರದ ಬಳಿಕ ಮತ್ತೊಂದು ಚಿಕಿತ್ಸೆ ಮಾಡಬೇಕು ಎಂದು ಅವರ ಮಗ ಚಿರಾಗ್ ಪಾಸ್ವಾನ್ ತಿಳಿಸಿದ್ದರು.
पापा….अब आप इस दुनिया में नहीं हैं लेकिन मुझे पता है आप जहां भी हैं हमेशा मेरे साथ हैं।
Miss you Papa… pic.twitter.com/Qc9wF6Jl6Z— युवा बिहारी चिराग पासवान (@iChiragPaswan) October 8, 2020
ಕಳೆದ ಕೆಲವು ದಿನಗಳಿಂದಲೂ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್ ವಿಲಾಸ್ ಪಾಸ್ವಾನ್, 8 ಬಾರಿ ಸಂಸದರಾಗಿದ್ದರು.