ಅಲಹಾಬಾದ್: ಆಗಸ್ಟ್ 05 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭ ನಿಗದಿಯಾಗಿದೆ. ಇದೀಗ ಆ ಸಮಾರಂಭದ ವಿರುದ್ಧ ಅಲಹಾಬಾದ್ ಹೈಕೋರ್ಟ್ ನಲ್ಲಿ ದೂರು ದಾಖಲಾಗಿದೆ.
ಆ. 5ರಂದು ನಡೆಯುವ ಶಿಲಾನ್ಯಾಸಕ್ಕೆ ತಡೆ ನೀಡುವಂತೆ ದೆಹಲಿ ಮೂಲದ ಸಾಕೇತ್ ಗೋಖಲೆ ಎಂಬುವವರು ದೂರು ದಾಖಲಿಸಿದ್ದಾರೆ. ಶಿಲಾನ್ಯಾಸ ಸಮಾರಂಭವು ಕೋವಿಡ್ -19 ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಆ ಕಾರ್ಯಕ್ರಮದಲ್ಲಿ ಕನಿಷ್ಟ ಮುನ್ನೂರು ಜನ ಸೇರುತ್ತಾರೆ. ಇದು ಅನ್ಲಾಕ್ -2 ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ಶಿಲಾನ್ಯಾಸ ಸಮಾರಂಭಕ್ಕೆ ದಿನಾಂಕ ಫಿಕ್ಸ್!
ಅಲ್ಲದೆ ಸಾಮಾಜಿಕ ಅಂತರದ ಕುರಿತು ಸರ್ಕಾರವೇ ಜನರಲ್ಲಿ ಅರಿವು ಮೂಡಿಸಿ, ಈಗ ಸರ್ಕಾರವೇ ಅದನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ. ಶಿಲಾನ್ಯಾಸದ ಹೆಸರಲ್ಲಿ ಇಷ್ಟೊಂದು ಜನ ಒಂದುಕಡೆ ಸೇರಿದರೆ, ಅದರಿಂದ ಮುಂದೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಭೂಮಿ ಪೂಜೆಗೆ ತಡೆ ನೀಡಿ” ಎಂದು ಒತ್ತಾಯಿಸಿ ದೂರು ದಾಖಲಿಸಲಾಗಿದೆ.
[…] ಓದಿ : ಶಿಲಾನ್ಯಾಸ ಸಮಾರಂಭಕ್ಕೆ ತಡೆ ನೀಡುವಂತೆ ಕೋ… […]