ಭಾರತದೊಳಗೆ ಹಂಚಿಹೋದ ಪ್ರದೇಶಗಳ ಒಂದುಗೂಡಿಸಿ
ಉಕ್ಕಿನ ಮನುಷ್ಯರೆಂಬ ಬಿರುದನ್ನು ಧರಿಸಿ
ದೇಶದ ಮೊದಲ ಗೃಹ ಮಂತ್ರಿಯ ಸ್ಥಾನವ ಅಲಂಕರಿಸಿದ ಹಿರಿಮೆ
ಹೈದರಾಬಾದ್ನ ನಿಜಾಮನ ಸೊಕ್ಕ ಅಡಗಿಸಿದ ಗರಿಮೆ
ಹಲವು ಸವಾಲುಗಳನ್ನು ಶಕ್ತಿ ಯುಕ್ತಿಯಿಂದ ಮೆಟ್ಟಿನಿಂತ ಛಲಗಾರ
ದೇಶದೊಳಗೆ ಏಕತೆಯನ್ನು ತಂದ ಸರದಾರ
ಪ್ರಜೆಗಳ ಪಾಲಿಗೆ ಇವರೇ ಸಾಹುಕಾರ
ಭಾರತದೇಶವ ಒಗ್ಗೂಡಿಸಿದ ನನಸ್ಸುಗಾರ
ಇಂದು ಆಚರಿಸುತ್ತಿದ್ದೇವೆ ರಾಷ್ಟ್ರೀಯ ಏಕತಾ ದಿನ
ಪಟೇಲರಿಗೆ ನನ್ನ ಮನದಾಳದ ನಮ್ರತೆಯ ನಮನ
ಇಂತಹ ಯುಗಪುರುಷರು ಮರಳಿ ಬರಲಿ ಈ ನಾಡಿಗೆ
ಇಂತಹ ಮಹಾತ್ಮರು ಮರಳಿ ಬರಲಿ ಈ ಗೂಡಿಗೆ